ರಶ್ಯ: ಚಿನ್ನದ ಗಣಿ ಕುಸಿತ, 13 ಕಾರ್ಮಿಕರು ನಾಪತ್ತೆ
ಮಾಸ್ಕೋ: ಪೂರ್ವ ಸೈಬೀರಿಯಾದ ಝೈಸ್ಕ್ ಜಿಲ್ಲೆಯ ಪಯೋನಿರ್ ಚಿನ್ನದ ಗಣಿ ಕುಸಿದು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಟ 13 ಕಾರ್ಮಿಕರು ಗಣಿಯಾಳದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಣಿಯೊಳಗೆ ಸುಮಾರು 410 ಅಡಿ ಆಳದಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದು ಕೊಳವೆಯ ಮೂಲಕ ಗಣಿಯಾಳಕ್ಕೆ ಆಮ್ಲಜನಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ರಶ್ಯದ ತುರ್ತು ಕಾರ್ಯ ನಿರ್ವಹಣಾ ಇಲಾಖೆ ಹೇಳಿದೆ. ಗಣಿಯಾಳದಲ್ಲಿ ಸಿಲುಕಿರುವ ಕಾರ್ಮಿಕರ ಜತೆ ಸಂವಹನ ಸಾಧ್ಯವಾಗಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಇಲಾಖೆ ಹೇಳಿದೆ.
Next Story