ಕಸ್ರ್ಕ್ ಪ್ರದೇಶದ ಅತೀ ದೊಡ್ಡ ನಗರ ಮರು ವಶಪಡಿಸಿಕೊಂಡ ರಶ್ಯ

PC : ANI
ಮಾಸ್ಕೋ: ರಶ್ಯದ ಗಡಿಭಾಗದ ಕಸ್ರ್ಕ್ ಪ್ರದೇಶದ ಅತೀ ದೊಡ್ಡ ನಗರ ಸುದ್ಝಾದಿಂದ ರಶ್ಯದ ಸೇನೆ ಉಕ್ರೇನ್ ಪಡೆಗಳನ್ನು ಹೊರಗಟ್ಟಿ ನಗರವನ್ನು ಮರು ವಶಪಡಿಸಿಕೊಂಡಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಗುರುವಾರ ಹೇಳಿದೆ.
ಕಳೆದ ಆಗಸ್ಟ್ನಲ್ಲಿ ಕಸ್ರ್ಕ್ ಪ್ರದೇಶದ ಮೇಲೆ ಅನಿರೀಕ್ಷಿತ ಆಕ್ರಮಣ ನಡೆಸಿದ್ದ ಉಕ್ರೇನ್ ಪಡೆ ಹೆಚ್ಚಿನ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿತ್ತು. ಆದರೆ ಕಳೆದ ತಿಂಗಳಿನಿಂದ ಕಸ್ರ್ಕ್ ಪ್ರದೇಶದಲ್ಲಿ ರಶ್ಯ ಪಡೆಗಳು ಮುನ್ನಡೆ ಸಾಧಿಸುತ್ತಿವೆ ಎಂದು ವರದಿಯಾಗಿದೆ.
Next Story