ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆದ ರಶ್ಯ : ಕನಿಷ್ಠ 4 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಕೀವ್ : ಸತತ ಎರಡನೇ ದಿನ ಉಕ್ರೇನ್ನಾಬದ್ಯಂತ ರಶ್ಯವು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತೀವ್ರಗೊಳಿಸಿದ್ದು ಕನಿಷ್ಠ 4 ಮಂದಿ ಮೃತಪಟ್ಟಿದ್ದು ಇತರ 16 ಮಂದಿ ಗಾಯಗೊಂಡಿದ್ದಾರೆ ಎಂದು ಮಂಗಳವಾರ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
81 ಡ್ರೋನ್ಗತಳು ಹಾಗೂ ಹಲವು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ರಶ್ಯದ ಸೇನೆ ಪ್ರಯೋಗಿಸಿದೆ. ಕೈಗಾರಿಕಾ ನಗರ ಕ್ರಿವಿರಿಹ್ನಟಲ್ಲಿ ಜನವಸತಿ ಕಟ್ಟಡದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕಟ್ಟಡ ಕುಸಿದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಗರದ ಆಡಳಿತ ಮುಖ್ಯಸ್ಥ ಒಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.
ರಶ್ಯದ ಈ ದಾಳಿ ಹಾಗೂ ಇತರ ಎಲ್ಲಾ ದಾಳಿಗಳಿಗೂ ನಾವು ನಿಸ್ಸಂದೇಹವಾಗಿ ಪ್ರತಿದಾಳಿ ನಡೆಸಲಿದ್ದೇವೆ. ಮಾನವೀಯತೆಯ ವಿರುದ್ಧದ ಅಪರಾಧವನ್ನು ಶಿಕ್ಷಿಸದೆ ಬಿಡಲಾಗದು' ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿವ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಮವಾರ ನಿರಂತರ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ತುತ್ತಾಗಿದ್ದ ಕೀವ್ ಪ್ರಾಂತದಲ್ಲಿ ಮಂಗಳವಾರವೂ ರಶ್ಯದ ದಾಳಿ ಮುಂದುವರಿದಿದೆ. ಸುಮಾರು 100 ಕ್ಷಿಪಣಿ ಹಾಗೂ ಇಷ್ಟೇ ಸಂಖ್ಯೆಯ ಡ್ರೋನ್ಗಿಳಿಂದ ರಶ್ಯ ದಾಳಿ ನಡೆಸಿದೆ. ಇದರಲ್ಲಿ ಬಹುತೇಕ ಕ್ಷಿಪಣಿ, ಡ್ರೋನ್ಗದಳನ್ನು ವಾಯುರಕ್ಷಣಾ ವ್ಯವಸ್ಥೆಯ ಮೂಲಕ ಹೊಡೆದುರುಳಿಸಲಾಗಿದೆ. ಆದರೆ ಉರಿದು ಬಿದ್ದ ಡ್ರೋನ್, ಕ್ಷಿಪಣಿಗಳ ಚೂರಿನಿಂದ ಕಾಡ್ಗಿಚ್ಚು ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ರಾಜಧಾನಿ ಕೀವ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂಧನ ಮೂಲಸೌಕರ್ಯಗಳು ಮತ್ತೊಮ್ಮೆ ರಶ್ಯ ಭಯೋತ್ಪಾದಕರ ಗುರಿಯಾಗಿವೆ' ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಹೇಳಿದ್ದು ಉಕ್ರೇನ್ಗೆತ ದೀರ್ಘ ದೂರ ವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಮತ್ತು ಅವನ್ನು ರಶ್ಯದ ವಿರುದ್ಧ ಬಳಸಲು ಅನುಮತಿ ನೀಡಬೇಕು ಎಂದು ಮಿತ್ರರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ.