ರಶ್ಯ ವಿಮಾನ ನಿಲ್ದಾಣದಲ್ಲಿ ಸುಗಂಧ ದ್ರವ್ಯದ ಪ್ಯಾಕ್ನಲ್ಲಿ ಬಾಂಬ್ ಪತ್ತೆ

ಸಾಂದರ್ಭಿಕ ಚಿತ್ರ
ಮಾಸ್ಕೋ: ಮೇಲ್ನೋಟಕ್ಕೆ ಸುಗಂಧ ದ್ರವ್ಯಗಳ ಉಡುಗೊರೆ ಪ್ಯಾಕ್ನಂತೆ ಕಾಣುತ್ತಿದ್ದ ಪಾರ್ಸೆಲ್ನಲ್ಲಿ ಇರಿಸಿದ್ದ ಬಾಂಬ್ಗಳನ್ನು ರಶ್ಯದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಸಕಾಲದಲ್ಲಿ ಪತ್ತೆಹಚ್ಚಿ ಸಂಭಾವ್ಯ ಭಾರೀ ದುರಂತವನ್ನು ತಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಚೆಲ್ಯಾಬಿಂಸ್ಕ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಸುಗಂಧ ದ್ರವ್ಯಗಳ 5 ಪ್ಯಾಕೆಟ್ನ ಬಗ್ಗೆ ಸಂದೇಹಗೊಂಡು ಪರಿಶೀಲನೆ ನಡೆಸಿದಾಗ ಪ್ಯಾಕೆಟ್ನ ಒಳಗಡೆ ಸುಧಾರಿತ ಸ್ಫೋಟಕ ಸಾಧನಗಳನ್ನು ಸುಗಂಧ ದ್ರವ್ಯದ ಪ್ಯಾಕೆಟ್ನಲ್ಲಿ ಇರಿಸಿರುವುದು ಪತ್ತೆಯಾಗಿದೆ. ಓರ್ವ ಶಂಕಿತ ವ್ಯಕ್ತಿ, ರಶ್ಯನ್ ಪ್ರಜೆಯನ್ನು ಬಂಧಿಸಲಾಗಿದೆ. ಈತ ಹಣದ ಆಮಿಷಕ್ಕೆ ಒಳಗಾಗಿ ಉಕ್ರೇನ್ ನ ವಿಶೇಷ ಸೇವಾಪಡೆಯ ಪರವಾಗಿ ಬಾಂಬ್ ಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ರಶ್ಯದ ಮಿಲಿಟರಿ ಅಧಿಕಾರಿಗಳ ಹೆಸರಿಗೆ `ಪತ್ರ ಬಾಂಬ್'ಗಳು ರವಾನೆಯಾಗಿದ್ದವು ಎಂದು ರಶ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story