ಮೆಡಿಟರೇನಿಯನ್ ಸಮುದ್ರದಲ್ಲಿ ರಶ್ಯದ ಸರಕು ನೌಕೆ ಮುಳುಗಡೆ
ಇಬ್ಬರು ಸಿಬ್ಬಂದಿ ನಾಪತ್ತೆ
ಸಾಂದರ್ಭಿಕ ಚಿತ್ರ :Photo:twitter
ಮಾಸ್ಕೋ : ರಶ್ಯದ ಸರಕು ನೌಕೆ `ಉರ್ಸಾ ಮೇಜರ್' ಸ್ಪೇನ್ ಮತ್ತು ಅಲ್ಜೀರಿಯಾದ ನಡುವೆ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದು ಅದರ ಇಬ್ಬರು ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ರಶ್ಯದ ವಿದೇಶಾಂಗ ಇಲಾಖೆ ಮಂಗಳವಾರ ಹೇಳಿದೆ.
ಹಡಗಿನ ಇಂಜಿನ್ ರೂಂನಲ್ಲಿ ಸ್ಫೋಟ ಸಂಭವಿಸಿದ ಬಳಿಕ ಹಡಗು ಮುಳುಗಿದ್ದು ಅದರಲ್ಲಿದ್ದ 16 ಸಿಬ್ಬಂದಿಗಳಲ್ಲಿ 14 ಮಂದಿಯನ್ನು ರಕ್ಷಿಸಿ ಸ್ಪೇನ್ಗೆ ಕರೆತರಲಾಗಿದೆ. ನಾಪತ್ತೆಯಾಗಿರುವ ಇಬ್ಬರ ಶೋಧ ಕಾರ್ಯ ಮುಂದುವರಿದಿದೆ ಎಂದು ಇಲಾಖೆ ಹೇಳಿದೆ. ರಶ್ಯದ ಸೈಂಟ್ ಪೀಟರ್ಸ್ಬರ್ಗ್ ಬಂದರಿನಿಂದ ಡಿಸೆಂಬರ್ 11ರಂದು ಹೊರಟಿದ್ದ ಸರಕು ನೌಕೆ ಡಿಸೆಂಬರ್ 23ರಂದು ಅಲ್ಜೀರಿಯಾ ಮತ್ತು ಸ್ಪೇನ್ ನಡುವಿನ ಸಮುದ್ರದಲ್ಲಿ ಮುಳುಗಿದೆ. ಬಂದರುಗಳಲ್ಲಿ ಬಳಸಲಾಗುವ ವಿಶೇಷ ಕ್ರೇನ್ಗಳನ್ನು ಹಡಗು ಸಾಗಿಸುತ್ತಿತ್ತು ಎಂದು ವರದಿಯಾಗಿದೆ.
Next Story