ಉಕ್ರೇನ್ ದಾಳಿಯಲ್ಲಿ ರಶ್ಯದ ಸಬ್ಮೆರಿನ್ ಮುಳುಗಡೆ : ವರದಿ
ಸಾಂದರ್ಭಿಕ ಚಿತ್ರ | Meta AI
ಕೀವ್ : ರಶ್ಯ ಆಕ್ರಮಿತ ಕ್ರಿಮಿಯಾ ಪ್ರಾಂತದಲ್ಲಿ ತನ್ನ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ ರಶ್ಯದ ಬಿ-237 ರೊಸ್ತೋವ್-ಆನ್ಡೊಶನ್ ಸಬ್ಮೆಿರಿನ್ ಮುಳುಗಿದೆ. ರಶ್ಯದ ವಾಯು ರಕ್ಷಣಾ ವ್ಯವಸ್ಥೆಯನ್ನೂ ನಾಶಗೊಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.
ಗಡಿಸನಿಹದ ಪ್ರಾಂತ ರೊಸ್ತೋವ್ ನ್ಲಿ 36, ಒರ್ಯೋಲ್ ಪ್ರಾಂತದಲ್ಲಿ 17 ಸೇರಿದಂತೆ ಉಕ್ರೇನ್ ರಕ್ಷಣಾ ಪಡೆಯ ಕನಿಷ್ಠ 76 ಡ್ರೋನ್ ಗನ್ನು ನಾಶಗೊಳಿಸಿರುವುದಾಗಿ ರಶ್ಯದ ಸೇನೆ ಹೇಳಿದೆ.
ರಶ್ಯಾ ಪ್ರದೇಶದ ಮೇಲಿನ ವೈಮಾನಿಕ ದಾಳಿಯನ್ನು ಉಕ್ರೇನ್ ಹೆಚ್ಚಿಸಿದ್ದು ಶನಿವಾರ ರಾತ್ರಿ ರೊಸ್ತೋವ್ ವಲಯದ ಮೊರೊಝೊವ್ಸ್ಕ್ ವಾಯುನೆಲೆ ಹಾಗೂ ತೈಲ ಡಿಪೋಗೆ ಡ್ರೋನ್ ದಾಳಿ ನಡೆಸಲಾಗಿದ್ದು ಇಲ್ಲಿದ್ದ ಯುದ್ಧವಿಮಾನಗಳಿಗೆ ಹಾನಿಯಾಗಿದೆ. ರೊಸ್ತೋವ್ನ ಕಮೆನ್ಸ್ಕಿ ಜಿಲ್ಲೆಯ ಇಂಧನ ಗೋದಾಮಿನ ಮೇಲೆಯೂ ದಾಳಿ ನಡೆದಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. ಡ್ರೋನ್ ದಾಳಿಯಿಂದ ಇಂಧನ ಗೋದಾಮಿನಲ್ಲಿದ್ದ ತೈಲ ಟ್ಯಾಂಕರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ರಶ್ಯದ ಅಧಿಕಾರಿಗಳೂ ಹೇಳಿದ್ದಾರೆ.
ಈ ಮಧ್ಯೆ, ಮೊರೊಝೊವ್ಸ್ಕ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಹಲವು ಶಾಲೆ, ಶಿಶುವಿಹಾರ, ಜನವಸತಿ ಕಟ್ಟಡಗಳು, ಕೈಗಾರಿಕಾ ಸಂಸ್ಥೆಗಳಿಗೆ ವ್ಯಾಪಕ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಸ್ಥಳೀಯ ಗವರ್ನರ್ ವ್ಯಾಸಿಲಿ ಗೊಲುಬೆವ್ ಹೇಳಿದ್ದಾರೆ.