ಉಕ್ರೇನಿನ ಆಸ್ತಿ ಮಾರಾಟಕ್ಕೆ ರಶ್ಯ ನಿರ್ಧಾರ
ಮಾಸ್ಕೊ: ಕ್ರಿಮಿಯಾದಲ್ಲಿರುವ ಸುಮಾರು 100 ಉಕ್ರೇನಿನ ಆಸ್ತಿಗಳನ್ನು ಮಾರಾಟ ಮಾಡಲು ಯೋಜಿಸಲಾಗಿದ್ದು ಇದರಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯ ಆಸ್ತಿಯೂ ಸೇರಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ನ ಭಾಗವಾಗಿದ್ದ ಕ್ರಿಮಿಯಾ ಪ್ರಾಂತವನ್ನು 2014ರಲ್ಲಿ ಆಕ್ರಮಿಸಿದ್ದ ರಶ್ಯ ಬಳಿಕ ಅದನ್ನು ಸ್ವಾಧೀನ ಪಡಿಸಿಕೊಂಡು ತನ್ನ ಆಡಳಿತವನ್ನು ಸ್ಥಾಪಿಸಿದೆ. ಆದರೆ ಈ ಕ್ರಮಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರಕಿಲ್ಲ. ಕ್ರಿಮಿಯಾದಲ್ಲಿದ್ದ ಉಕ್ರೇನ್ ಸರಕಾರದ ಸುಮಾರು 500 ಆಸ್ತಿಗಳನ್ನು ರಶ್ಯ ಸರಕಾರ ರಾಷ್ಟ್ರೀಕರಣಗೊಳಿಸಿದ್ದು ಇದರಲ್ಲಿ ಸುಮಾರು 100 ಆಸ್ತಿಗಳನ್ನು ಮಾರಾಟ ಮಾಡಲು ಈಗ ಯೋಜಿಸಲಾಗಿದೆ. ಇದರಿಂದ ಸುಮಾರು 8.51 ದಶಲಕ್ಷ ಡಾಲರ್ ಹಣ ಸಂಗ್ರಹಗೊಳ್ಳುವ ನಿರೀಕ್ಷೆಯಿದೆ ಎಂದು ಕ್ರಿಮಿಯಾ ಸಂಸತ್ ನ ಸ್ಪೀಕರ್ ವ್ಲಾದಿಮಿರ್ ಕಾನ್ಸ್ಟಾಂಟಿನೋವ್ ಹೇಳಿದ್ದಾರೆ.
Next Story