ನಿಷೇಧಿತ ಭಯೋತ್ಪಾದಕ ಗುಂಪಿನ ಪಟ್ಟಿಯಿಂದ ಅಫ್ಘಾನ್ ತಾಲಿಬಾನ್ ಹೊರಗಿರಿಸಿದ ರಶ್ಯ
PC : AP/PTI
ಮಾಸ್ಕೋ : ಸುಮಾರು 2 ದಶಕಗಳಿಂದ ನಿಷೇಧಿತ ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿದ್ದ ಅಫ್ಘಾನಿಸ್ತಾನದ ತಾಲಿಬಾನ್ ಅನ್ನು ಪಟ್ಟಿಯಿಂದ ಹೊರಗೆ ಇರಿಸುವುದಾಗಿ ರಶ್ಯ ಗುರುವಾರ ಘೋಷಿಸಿದೆ.
2021ರ ಆಗಸ್ಟ್ನಿಂದ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಸರಕಾರಕ್ಕೆ ಪ್ರಸ್ತುತ ಯಾವುದೇ ದೇಶವೂ ಮಾನ್ಯತೆ ನೀಡಿಲ್ಲ. ಆದರೆ ರಶ್ಯವು ಕ್ರಮೇಣ ತಾಲಿಬಾನ್ ಜತೆ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುತ್ತಿದೆ. 2003ರಲ್ಲಿ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ರಶ್ಯ ನಿಷೇಧಿಸಿತ್ತು. ಗುರುವಾರ ರಶ್ಯದ ಸುಪ್ರೀಂಕೋರ್ಟ್ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧವನ್ನು ತೆರವುಗೊಳಿಸಿರುವುದಾಗಿ `ತಾಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
Next Story