ಬಾಂಗ್ಲಾದಲ್ಲಿ ಉಷ್ಣಮಾರುತ ಉಲ್ಬಣದ ನಡುವೆಯೂ ಶಾಲಾ ಕಾಲೇಜುಗಳು ಪುನಾರಂಭ
ಸಾಂದರ್ಭಿಕ ಚಿತ್ರ
ಢಾಕಾ: ತೀವ್ರವಾದ ಬಿಸಿಲತಾ ಮುಂದುವರಿದಿದ್ದರೂ, ಬಾಂಗ್ಲಾದೇಶದಲ್ಲಿ ರವಿವಾರ ಶಾಲಾತರಗತಿಗಳು ಪುನಾರಂಭಗೊಂಡಿದ್ದು,ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗಳಿಗೆ ಮರಳಿದ್ದಾರೆ. ತೀವ್ರ ಉಷ್ಣ ಮಾರುತದ ಹಿನ್ನೆಲೆಯಲ್ಲಿ ಕಳೆದ ವಾರ ಬಾಂಗ್ಲಾದ್ಯಂತ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ರಾಜಧಾನಿ ಢಾಕದಲ್ಲಿ ಕಳೆದ ವಾರ ಗರಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ (7.2-9 ಡಿಗಿ ಫ್ಯಾರನ್ಹೀಟ್) ಆಗಿದ್ದು, ಇದು ಈ ಅವಧಿಯಲ್ಲಿ ಕಳೆದ 30 ವರ್ಷಗಳಲ್ಲೇ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ದೇಶದಲ್ಲಿ ಉಷ್ಣಮಾರುತದ ಪರಿಸ್ಥಿತಿ ಇನ್ನೂ ಹಲವಾರು ದಿನಗಳ ಕಾಲ ಮುಂದುವರಿಯಲಿದೆ ಎಂದು ವರದಿ ಮಾಡಿದೆ.
ಬಾಂಗ್ಲಾದ ನಾಲ್ಕನೇ ಮೂರು ಭಾಗದಷ್ಟು ಭೂಪ್ರದೇಶದ ಮೇಲೆ ಉಷ್ಣ ಮಾರುತ ತೀವ್ರವಾದ ಪರಿಣಾಮ ಬೀರಿದೆಯೆಂದು ಹವಾಮಾನ ತಜ್ಞ ಮುಹಮ್ಮದ್ ಅಬ್ದುಲ್ ಕಲಾಂ ಮಲ್ಲಿಕ್ ತಿಳಿಸಿದ್ದಾರೆ.
Next Story