13.4 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ನಕ್ಷತ್ರಪುಂಜದಲ್ಲಿ ಆಮ್ಲಜನಕ ಪತ್ತೆಹಚ್ಚಿದ ವಿಜ್ಞಾನಿಗಳು

PC | NDTV
ರೋಮ್: ವಿಜ್ಞಾನಿಗಳು ಇದುವರೆಗೆ ಕಂಡುಹಿಡಿದ ಅತ್ಯಂತ ದೂರದ ನಕ್ಷತ್ರಪುಂಜದಲ್ಲಿ ಆಮ್ಲಜನಕದ ಕುರುಹನ್ನು ಪತ್ತೆಹಚ್ಚಿದ್ದು ಬ್ರಹ್ಮಾಂಡದಲ್ಲಿ ನಕ್ಷತ್ರದ ವಿಕಾಸದ ಬಗ್ಗೆ ಅಸ್ತಿತ್ವದಲ್ಲಿರುವ ಸಿದ್ಧಾಂತಗಳನ್ನು ಇದು ಪ್ರಶ್ನಿಸಿದೆ.
ಜೇಡ್ಸ್-ಜಿಎಸ್-ಝೆಡ್ 14-0 ಎಂದು ಹೆಸರಿಸಲಾದ ನಕ್ಷತ್ರಪುಂಜವನ್ನು ಕಳೆದ ವರ್ಷ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಮೊದಲು ಗುರುತಿಸಿತ್ತು. ಇದು ಭೂಮಿಗಿಂತ ಎಷ್ಟು ದೂರದಲ್ಲಿದೆ ಎಂದರೆ ಭೂಮಿಯನ್ನು ತಲುಪಲು 13.4 ಶತಕೋಟಿ ಜ್ಯೋತಿರ್ವರ್ಷಗಳು ಬೇಕಾಗುತ್ತದೆ.
ಅಂದರೆ ಬ್ರಹ್ಮಾಂಡಕ್ಕೆ ಕೇವಲ 300 ಶತಕೋಟಿ ವರ್ಷಗಳಾಗಿದ್ದಾಗ ಇದು ಅಸ್ತಿತ್ವದಲ್ಲಿತ್ತು. ನೆದರ್ ಲ್ಯಾಂಡ್ ಮತ್ತು ಇಟಲಿಯ ಸಂಶೋಧಕರ ತಂಡವು ಆಲ್ಮಾ ರೇಡಿಯೊ ಟೆಲಿಸ್ಕೋಪ್ ಬಳಸಿ ಜೇಡ್ಸ್-ಜಿಎಸ್-ಝೆಡ್14-0 ನಕ್ಷತ್ರಪುಂಜದ ಅಧ್ಯಯನ ನಡೆಸಿ ನಕ್ಷತ್ರಪುಂಜದಲ್ಲಿ ಆಮ್ಲಜನಕದ ಕುರುಹನ್ನು ದೃಢಪಡಿಸಿದೆ ಎಂದು ವರದಿಯಾಗಿದೆ.
Next Story