ಅಮೆರಿಕದ ನಗರದಲ್ಲಿ ಕತ್ತರಿಸಿದ ತಲೆಗಳು ಪತ್ತೆ
ವಾಷಿಂಗ್ಟನ್ : ಅಮೆರಿಕದ ನ್ಯೂಯಾರ್ಕ್ ರಾಜ್ಯದ ನಸಾವು ಕೌಂಟಿಯ ಹೆಂಪ್ಸ್ಟೆಡ್ ಪ್ರದೇಶದ ಐಲ್ಯಾಂಡ್ ಪಾರ್ಕ್ ನಗರದಲ್ಲಿ ಕತ್ತರಿಸಿದ 2 ತಲೆಗಳು ಹಾಗೂ ಮಾನವನ ದೇಹದ ಇತರ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಇದರಲ್ಲಿ ಒಂದು ತಲೆ, ಬಲಗೈ ಮತ್ತು ಕಾಲುಗಳು ಮಹಿಳೆಯದ್ದು ಎಂದು ಶಂಕಿಸಲಾಗಿದೆ. ಈ ನಗರದಲ್ಲಿ ಶಾಲೆಗೆ ತೆರಳುತ್ತಿದ್ದ ಹುಡುಗಿಯೊಬ್ಬಳು ರಸ್ತೆಯ ಪಕ್ಕದಲ್ಲಿ ಕತ್ತರಿಸಿ ಬಿಸಾಡಲಾಗಿದ್ದ ಕೈ ಒಂದನ್ನು ಕಂಡು ತಕ್ಷಣ ತನ್ನ ತಂದೆಗೆ ತಿಳಿಸಿದ್ದಾಳೆ. ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆ ಪ್ರದೇಶದಲ್ಲಿ ಹುಡುಕಾಡಿದಾಗ ಸಮೀಪದಲ್ಲಿ 2 ಕತ್ತರಿಸಿದ ತಲೆಗಳು ಹಾಗೂ ಮಾನವ ದೇಹದ ಹಲವು ಅಂಗಾಂಗಗಳು ಪತ್ತೆಯಾಗಿವೆ. ಕುಖ್ಯಾತ ಎಂಎಸ್-13 ಕ್ರಿಮಿನಲ್ ಗ್ಯಾಂಗಿನ ಕೃತ್ಯ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರಿಸಿದ್ದಾರೆ.
Next Story