ತಮ್ಮ ಪದಚ್ಯುತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ
ಶೇಖ್ ಹಸೀನಾ (PTI)
ಹೊಸದಿಲ್ಲಿ: ತಾನು ಅಧಿಕಾರದಿಂದ ಕೆಳಗಿಳಿಯಲು ಅಮೆರಿಕ ಕಾರಣ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.
“ನನಗೆ ಮೃತದೇಹಗಳ ಮೆರವಣಿಗೆಯನ್ನು ನೋಡಲು ಇಷ್ಟವಿಲ್ಲದೆ ಇದ್ದುದರಿಂದ, ನಾನು ರಾಜೀನಾಮೆ ಸಲ್ಲಿಸಿದೆ. ಅವರಿಗೆ ವಿದ್ಯಾರ್ಥಿಗಳ ಮೃತದೇಹಗಳ ಮೇಲೆ ಅಧಿಕಾರಕ್ಕೆ ಬರಬೇಕಿತ್ತು. ಆದರೆ, ನಾನದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ, ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ” ಎಂದು ಶೇಖ್ ಹಸೀನಾ ಹೇಳಿದ್ದಾರೆ.
“ನಾನು ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತೆಯನ್ನು ಶರಣಾಗಿಸಿ, ಬಂಗಾಳ ಕೊಲ್ಲಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕಾಗೆ ಅವಕಾಶ ನೀಡಿದ್ದರೆ, ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು. ದಯವಿಟ್ಟು ಮೂಲಭೂತವಾದಿಗಳಿಂದ ದಾರಿ ತಪ್ಪಬೇಡಿ ಎಂದು ನನ್ನ ತಾಯ್ನಾಡಿನ ಜನರನ್ನು ಬೇಡಿಕೊಳ್ಳುತ್ತೇನೆ” ಎಂದು ಸಂದೇಶವೊಂದರಲ್ಲಿ ಶೇಖ್ ಹಸೀನಾ ಮನವಿ ಮಾಡಿದ್ದಾರೆ ಎಂದು The Economic Times ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ತಲೆದೋರಿದ ರಾಜಕೀಯ ಅರಾಜಕತೆಯಿಂದಾಗಿ ಶೇಖ್ ಹಸೀನಾ ಆಗಸ್ಟ್ 5ರಂದು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಭಾರತಕ್ಕೆ ಪರಾರಿಯಾಗಿದ್ದರು.