‘ಇಸ್ರೇಲ್ ಗೆ ಸ್ವರಕ್ಷಣೆಯ ಹಕ್ಕಿದೆ’ : ನಿಲುವು ಬದಲಿಸಿದ ಚೀನಾ
ಬೀಜಿಂಗ್: ವಿದೇಶಾಂಗ ಸಚಿವ ವಾಂಗ್ಯಿ ಅಮೆರಿಕಕ್ಕೆ ಉನ್ನತ ಮಟ್ಟದ ಭೇಟಿಗೆ ಸಿದ್ಧತೆ ನಡೆಸುತ್ತಿರುವಂತೆಯೇ, ಇಸ್ರೇಲ್-ಹಮಾಸ್ ಯುದ್ಧದ ಕುರಿತ ತನ್ನ ನಿಲುವು ಬದಲಿಸಿರುವ ಚೀನಾ, ಇಸ್ರೇಲ್ ಗೆ ಸ್ವರಕ್ಷಣೆಯ ಎಲ್ಲಾ ಹಕ್ಕೂ ಇದೆ ಎಂದು ಹೇಳಿಕೆ ನೀಡಿದೆ.
ಪ್ರತಿಯೊಂದು ದೇಶಕ್ಕೂ ಸ್ವರಕ್ಷಣೆಯ ಹಕ್ಕು ಇದೆ. ಆದರೆ ಅಂತರಾಷ್ಟ್ರೀಯ ಮಾನವೀಯ ಕಾನೂನು ಹಾಗೂ ನಾಗರಿಕರನ್ನು ರಕ್ಷಿಸುವುದಕ್ಕೆ ಬದ್ಧವಾಗಿರಬೇಕು ಎಂದು ಸೋಮವಾರ ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ ವಾಂಗ್ ಯಿ ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ‘ಕ್ಸಿನ್ಹುವಾ’ ಸುದ್ಧಿಸಂಸ್ಥೆ ವರದಿ ಮಾಡಿದೆ.
Next Story