ಜಪಾನ್ ಪ್ರಧಾನಿಯಾಗಿ ಶಿಗೆರು ಇಷಿಬಾ ಆಯ್ಕೆ
PC : X/@shigeruishiba
ಟೋಕಿಯೊ : ಜಪಾನ್ನಗ ಮಾಜಿ ರಕ್ಷಣಾ ಸಚಿವ ಶಿಗೆರು ಇಷಿಬಾ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಗೊಂಡಿರುವುದಾಗಿ ಆಡಳಿತಾರೂಢ ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಫ್ಯುಮಿಯೊ ಕಿಷಿಡಾ ತನ್ನ ಅಧಿಕಾರಾವಧಿಯನ್ನು ಕೊನೆಗೊಳಿಸುತ್ತಿದ್ದಂತೆಯೇ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡಲು ಆಡಳಿತಾರೂಢ `ಲಿಬರಲ್ ಡೆಮಾಕ್ರಟಿಕ್ ಪಾರ್ಟಿ(ಎಲ್ಡಿುಪಿ)ಯ ಸದಸ್ಯರು ನಡೆಸಿದ ಮತದಾನದಲ್ಲಿ 67 ವರ್ಷದ ಇಷಿಬಾ ತಮ್ಮ ನಿಕಟ ಪ್ರತಿಸ್ಪರ್ಧಿ, ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗುವ ಹಂಬಲದಲ್ಲಿದ್ದ ಸನೇ ತಕೈಚಿಯನ್ನು ಸೋಲಿಸಿದರು ಎಂದು ವರದಿ ಹೇಳಿದೆ.
9 ಅಭ್ಯರ್ಥಿಗಳ ಪೈಕಿ ಇಷಿಬಾ 215 ಮತಗಳನ್ನು ಸನೇ ತಕೈಚಿ 194 ಮತಗಳನ್ನು ಗಳಿಸಿದ್ದರು. 2012ರಲ್ಲೂ ಪ್ರಧಾನಿ ಹುದ್ದೆಯ ರೇಸ್ನ್ಲ್ಲಿದ್ದ ಇಷಿಬಾ, ಶಿಂಝೋ ಅಬೆ ಎದುರು ಸೋತಿದ್ದರು. ಅಕ್ಟೋಬರ್ ನಲ್ಲಿ ನೂತನ ಪ್ರಧಾನಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
Next Story