ಗ್ರೀಕ್‍ನಲ್ಲಿ ಶೂಟೌಟ್ | ಒಬ್ಬ ಮೃತ್ಯು; ಇಬ್ಬರಿಗೆ ಗಾಯ
ಅಥೆನ್ಸ್: ಗ್ರೀಸ್ ರಾಜಧಾನಿ ಅಥೆನ್ಸ್‍ನ `ಯುರೋಪಿಯನ್ ನ್ಯಾವಿಗೇಷನ್' ಶಿಪ್ಪಿಂಗ್ ಸಂಸ್ಥೆಯಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಟ ಓರ್ವ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಇಆರ್‍ಟಿ ಟಿವಿ ವರದಿ ಮಾಡಿದೆ.
ಅಥೆನ್ಸ್ ಹೊರವಲಯದ ಗ್ಲಿಫಾಡ ನಗರದಲ್ಲಿ ಇರುವ ಶಿಪ್ಪಿಂಗ್ ಸಂಸ್ಥೆಯಲ್ಲಿ ಪ್ರಕರಣ ವರದಿಯಾಗಿದ್ದು ಸಂಸ್ಥೆಯ ಮಾಜಿ ಉದ್ಯೋಗಿ ಆರೋಪಿಯಾಗಿದ್ದಾನೆ. ಮಾಲಕರೊಂದಿಗೆ ಮನಸ್ತಾಪ ಹೊಂದಿದ್ದ ಆರೋಪಿ ಶಿಪ್ಪಿಂಗ್ ಸಂಸ್ಥೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದು ಮೃತಪಟ್ಟ ವ್ಯಕ್ತಿ ಮಾಲಕರ ಸಂಬಂಧಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Next Story