ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಭಾರೀ ವಿದ್ಯುತ್ ಕಡಿತ; ರೈಲು ಸಂಚಾರ ಸ್ಥಗಿತ

PC : NDTV
ಮ್ಯಾಡ್ರಿಡ್: ಸ್ಪೇನ್ ಮತ್ತು ಪೋರ್ಚುಗಲ್ನಾದ್ಯಂತ ಸೋಮವಾರ ಭಾರೀ ವಿದ್ಯುತ್ ಕಡಿತ ಸಂಭವಿಸಿದ್ದು ನಿರ್ಣಾಯಕ ಮೂಲಸೌಕರ್ಯಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು ಹಲವೆಡೆ ಟ್ರಾಫಿಕ್ ಜಾಂನಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿಮಾನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ವಿದ್ಯುತ್ ಕಡಿತವು ಮ್ಯಾಡ್ರಿಡ್, ಬಾರ್ಸಿಲೋನಾ, ಲಿಸ್ಬನ್, ಸೆವಿಲ್ಲೆ ಮತ್ತು ಪೋರ್ಟೋ ಸೇರಿದಂತೆ ಕೈಗಾರಿಕಾ ನಗರಗಳ ಮೇಲೆ ಪರಿಣಾಮ ಬೀರಿದೆ. ಅಗತ್ಯಬಿದ್ದರೆ ಮಾತ್ರ ತಮ್ಮ ಕಾರುಗಳನ್ನು ಬಳಸುವಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಪೋರ್ಚುಗಲ್ ರಾಜಧಾನಿ ಲಿಸ್ಬನ್ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಹಾಗೂ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಯುರೋಪಿಯನ್ ಇಲೆಕ್ಟ್ರಿಸಿಟಿ ವ್ಯವಸ್ಥೆಯಲ್ಲಿ ಕಂಡುಬಂದ ದೋಷವು ಸಮಸ್ಯೆಗೆ ಕಾರಣವಾಗಿದೆ ಎಂದು `ಎಕ್ಸ್ಪ್ರೆಸ್ಸೊ' ಸುದ್ದಿಸಂಸ್ಥೆ ವರದಿ ಮಾಡಿದೆ.
Next Story