ಶ್ರೀಲಂಕಾ ಸಂಸತ್ ಚುನಾವಣೆ : 190ಕ್ಕೂ ಅಧಿಕ ಮಂದಿ ಬಂಧನ
ಕೊಲಂಬೊ : ಶ್ರೀಲಂಕಾದಲ್ಲಿ ನವೆಂಬರ್ 14ರಂದು ನಡೆಯಲಿರುವ ಸಂಸದೀಯ ಚುನಾವಣೆಗೆ ಸಂಬಂಧಿಸಿದ ದೂರಿನ ಹಿನ್ನೆಲೆಯಲ್ಲಿ 6 ಅಭ್ಯರ್ಥಿಗಳ ಸಹಿತ 191 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂಸದೀಯ ಚುನಾವಣೆಗೆ ಸಂಬಂಧಿಸಿ 168 ದೂರುಗಳನ್ನು ಸ್ವೀಕರಿಸಲಾಗಿದೆ. ಚುನಾವಣೆ ಕಾನೂನಿನ ಉಲ್ಲಂಘನೆಯ ಬಗ್ಗೆ 138 ದೂರುಗಳು, ಅಪರಾಧಕ್ಕೆ ಸಂಬಂಧಿಸಿದ 30 ದೂರುಗಳು ಇದರಲ್ಲಿ ಸೇರಿವೆ.
ದೂರಿಗೆ ಸಂಬಂಧಿಸಿ 45 ಮೋಟಾರು ವಾಹನಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರ ಡಿಐಜಿ ನಿಹಾಲ್ ಥಾಲ್ದುವಾರನ್ನು ಉಲ್ಲೇಖಿಸಿ `ನ್ಯೂಸ್ ಫಸ್ಟ್' ವರದಿ ಮಾಡಿದೆ.
ಈ ಮಧ್ಯೆ, ಸಂಸದೀಯ ಚುನಾವಣೆಗೆ ಸಂಬಂಧಿಸಿ 1,259 ದೂರುಗಳನ್ನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗ ಹೇಳಿದೆ.
Next Story