ಚೀನಾದ ಜತೆಗಿನ ಬಂದರು ಅಭಿವೃದ್ಧಿ ಯೋಜನೆ ಮುಂದುವರಿಕೆ: ಶ್ರೀಲಂಕಾ
ಕೊಲಂಬೋ, ಮಾ.30: ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಭಾಗವಾಗಿ ಕೊಲಂಬೊ ಮತ್ತು ಹಂಬನ್‍ತೋಟ ಬಂದರುಗಳ ಅಭಿವೃದ್ಧಿಯಲ್ಲಿ ಚೀನಾದ ಜತೆಗೆ ಕೆಲಸ ಮಾಡುವುದಾಗಿ ಶ್ರೀಲಂಕಾದ ಪ್ರಧಾನಿ ಹೇಳಿದ್ದಾರೆ.
ಸಾಲ ಮರುರಚನೆ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನವಾಗಿ ಚೀನಾಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿ ದಿನೇಶ್ ಗುಣವರ್ದನ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಜತೆ ಉನ್ನತ ಮಟ್ಟದ ಸಭೆ ನಡೆಸಿದರು. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ಒಟ್ಟು ವಿದೇಶಿ ಸಾಲದಲ್ಲಿ ಸುಮಾರು 10% ಚೀನಾದ ಸಾಲವಾಗಿದೆ. `ಶ್ರೀಲಂಕಾದ ಆರ್ಥಿಕ ಸಂಸ್ಥೆಗಳಿಗೆ ಬೆಂಬಲ ಮುಂದುವರಿಸಲು ಚೀನಾ ಬಯಸಿದೆ ಮತ್ತು ಐಎಂಎಫ್ ಸಾಲ ಪಡೆಯಲು ನೆರವಾಗಲಿದೆ. ಕೊಲಂಬೊ ಮತ್ತು ಹಂಬನ್‍ತೋಟ ಬಂದರು ಅಭಿವೃದ್ಧಿ ಯೋಜನೆಯನ್ನು ಉತ್ತೇಜಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ' ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
Next Story