ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕೆ ಮುಂದಿನ ವಾರ ಭಾರತಕ್ಕೆ ಭೇಟಿ
ಅನುರ ಕುಮಾರ್ ದಿಸ್ಸಾನಾಯಕೆ | PC : FB
ಕೊಲಂಬೊ : ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರು ಮುಂದಿನ ವಾರ ಭಾರತಕ್ಕೆ ಬೇಟಿ ನೀಡಲಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ರ ಭಾರತ ಪ್ರವಾಸವು ಉಭಯದೇಶಗಳ ನಡುವಿನ ಬಾಂಧವ್ಯದ ಉತ್ತಮ ಸೂಚಕವೆಂದು ಬಣ್ಣಿಸಲಾಗಿದೆ.
ಶ್ರೀಲಂಕಾ ಸಂಪುಟದ ವಕ್ತಾರ ಡಾ. ನಲಿಂದಾ ಜಯತಿಸ್ಸಾ ಅವರು ಹೇಳಿಕೆಯೊಂದನ್ನು ನೀಡಿ, ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಅವರು ಡಿಸೆಂಬರ್ 15ರಿಂದ 17ರವರೆಗೆ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ತನ್ನ ಭಾರತ ಭೇಟಿಯ ಅವಧಿಯಲ್ಲಿ, ಅನುರಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆಂದು ಜಯತಿಸ್ಸಾ ತಿಳಿಸಿದ್ದಾರೆ.
ವಿದೇಶಾಂಗ ಸಚಿವ ವಿಜಿತಾ ಹೇರತಾ ಹಾಗೂ ಸಹಾಯಕ ವಿತ್ತ ಸಚಿವ ಅನಿಲ್ ಜಯಂತ ಫೆರ್ನಾಂಡೊ , ಅಧ್ಯಕ್ಷರ ಜೊತೆಗೆ ಆಗಮಿಸಲಿದ್ದಾರೆಂದು ಆರೋಗ್ಯ ಸಚಿವಪರೂ ಆದ ಜಯತಿಸ್ಸಾ ಹೇಳಿದ್ದಾರೆ.
ಸೆಪ್ಟೆಂಬರ್ನಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ಬಳಿ ದಿಸ್ಸಾ ನಾಯಕೆ ಅವರ ಪ್ರಪ್ರಥಮ ವಿದೇಶ ಪ್ರವಾಸವೂ ಇದಾಗಿದೆಯೆಂದು ಮೂಲಗಳು ತಿಳಿಸಿವೆ.
ಅಧ್ಯಕ್ಷೀಯ ಚುನಾಣೆಯಲ್ಲಿ ದಿಸ್ಸಾನಾಯಕೆ ಅವರು ವಿಜಯಗಳಿಸಿದ ಕೆಲವೇ ದಿನಗಳಬಳಿಕ ವಿದೇಶಾಂಗ ಸಚಿವ ಡಾ. ಎಸ್.ಜೈಶಂಕರ್ ಅವರು ಶ್ರೀಲಂಕಾಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಭಾರತಕ್ಕೆ ಭೇಟಿ ನೀಡುವಂತೆ ದಿಸ್ಸಾ ನಾಯಕೆ ಅವರಿಗೆ ಆಹ್ವಾನ ನೀಡಿದ್ದರು.
ದಿಸ್ಸಾ ನಾಯಕೆ ನೇತೃತ್ವದ ನ್ಯಾಶನಲ್ ಪೀಪಲ್ಸ್ ಪವರ್ (ಎನ್ಪಿಪಿ) ಪಕ್ಷವು ಸೆಪ್ಟೆಂಬರ್ 23ರಂದು ಅಧಿಕಾರಕ್ಕೇರಿತ್ತು.