ರಶ್ಯದಲ್ಲಿ ಚಂಡಮಾರುತ: ಹಲವೆಡೆ ತುರ್ತುಪರಿಸ್ಥಿತಿ ಘೋಷಣೆ
Photo credit: timesofindia.com
ಮಾಸ್ಕೊ : ಚಂಡಮಾರುತದ ಹೊಡೆತಕ್ಕೆ ತತ್ತರಿಸಿರುವ ಪೂರ್ವ ರಶ್ಯದ 9 ನಗರಪಾಲಿಕೆ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಆರ್ಐಎ ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.
ಪೂರ್ವ ರಶ್ಯ ಪ್ರಾಂತದಲ್ಲಿ 32 ವಸಾಹತುಗಳು ಇತರ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದರೆ 543 ಮನೆಗಳು ಹಾಗೂ ಪ್ರಮುಖ ರಸ್ತೆಗಳು ನೆರೆನೀರಿನಲ್ಲಿ ಮುಳುಗಿವೆ. ಪ್ರಿಮೋರ್ಯೆ ಪ್ರದೇಶದ 9 ನಗರಪಾಲಿಕೆ ವ್ಯಾಪ್ತಿಯಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಲಾಗಿದೆ. ಉಸುರಿಯಸ್ಕ್ ಗ್ರಾಮದಲ್ಲಿ ಅಣೆಕಟ್ಟೊಂದು ಒಡೆದು ಹಲವು ಮನೆಗಳು ಜಲಾವೃತಗೊಂಡಿದೆ ಎಂದು ವರದಿ ಹೇಳಿದೆ.
Next Story