ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂಕಂಪಮಾಪನ ಇಲಾಖೆ ಪ್ರಕಟಿಸಿದೆ.
ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ಹೊಂದಿದ್ದ ಈ ಪ್ರಬಲ ಭೂಕಂಪ 10 ಕಿಲೋಮೀಟರ್ ಆಳದಲ್ಲಿ, ಫೆರ್ನ್‌ಡೇಲ್‌ನಿಂದ ನೈರುತ್ಯಕ್ಕೆ 100 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದು ಅಮೆರಿಕದ ಜಿಯೊಲಾಜಿಕಲ್ ಸರ್ವೆ ಹೇಳಿದೆ.
"ಪ್ರಾಥಮಿಕ ಭೂಕಂಪ ಮಾನದಂಡಗಳ ಆಧಾರದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದ ಪ್ರದೇಶದಿಂದ 300 ಕಿಲೋಮೀಟರ್ ಸುತ್ತಲ ಕರಾವಳಿ ಪ್ರದೇಶದಲ್ಲಿ ಅಪಾಯಕಾರಿ ಸುನಾಮಿ ಸಾಧ್ಯತೆ ಇದೆ" ಎಂದು ರಾಷ್ಟ್ರೀಯ ಹವಾಮಾನ ಸೇವೆಗಳ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಹೇಳಿದೆ.
ಆದರೆ ಇದುವರೆಗೆ ಯಾವುದೇ ಪ್ರದೇಶದಲ್ಲಿ ದೈತ್ಯ ಅಲೆಗಳು ಕಂಡುಬಂದಿಲ್ಲ. ಆದರೆ ಈ ಅಪಾಯ ಸಾಧ್ಯತೆ ಬಗ್ಗೆ ಕರಾವಳಿ ತೀರದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
Next Story