286 ದಿನಗಳಲ್ಲಿ 4576 ಬಾರಿ ಭೂಕಕ್ಷೆ ಸುತ್ತಿದ್ದ ಸುನಿತಾ

PC: x.com/divya_50
ವಾಷಿಂಗ್ಟನ್: ಒಂಬತ್ತು ತಿಂಗಳ ಅನಿರೀಕ್ಷಿತ ವಿಳಂಬದಿಂದಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 286 ದಿನ ಕಾಲ ಉಳಿದು ಭೂಮಿಗೆ ಮರಳಿರುವ ಭಾರತ ಮೂಲದ ಬಾಹ್ಯಾಕಾಶ ಯಾನಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ತಮ್ಮ ಬಾಹ್ಯಾಕಾಶ ವಾಸದ ಅವಧಿಯಲ್ಲಿ 4576 ಬಾರಿ ಭೂಕಕ್ಷೆ ಸುತ್ತಿದ್ದಾರೆ
ಸ್ಪೇಸ್ಎಕ್ಸ್ ನ ಡ್ರ್ಯಾಗಲ್ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಫ್ಲೋರಿಡಾ ಕರಾವಳಿಯಲ್ಲಿ ಮಂಗಳವಾರ ರಾತ್ರಿ ಇಳಿದಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಮಿಷನ್ ಕೊನೆಗೊಂಡಂತಾಗಿದೆ. ಉಳಿಕೆ ತಂತ್ರಜ್ಞರಿಂದ ಬೀಳ್ಕೊಡುಗೆ ಮತ್ತು ಆತ್ಮೀಯ ಆಲಿಂಗನ ಸ್ವೀಕರಿಸಿದ ಬಳಿಕ ಮುಂಜಾನೆ ಅವರು ಐಎಸ್ಎಸ್ ನಿಂದ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು.
ಫ್ರೀಡಂ ಹೆಸರಿನ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗಲ್ ಕ್ಯಾಪ್ಸೂಲ್ ಇದೀಗ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಲು ಸಜ್ಜಾಗಿದ್ದವು. ಸುಡುವ 3000 ಡಿಗ್ರಿ ಫ್ಯಾರನ್ ಹೀಟ್ ತಾಪಮಾನದಿಂದ ಇದು ರಕ್ಷೆ ಪಡೆಯಬೇಕಾದ ಈ ಕ್ಯಾಪ್ಸೂಲ್ ನ ಪ್ಯಾರಾಚೂಟ್ ಗಳು ಫ್ಲೋರಿಡಾ ಕರಾವಳಿಯಲ್ಲಿ ನಿಯೋಜಿಸಲ್ಪಟ್ಟಿದ್ದವು.
ತಮ್ಮ ಬಾಹ್ಯಾಕಾಶ ವಾಸದ ಅವಧಿಯಲ್ಲಿ ಉಭಯ ಯಾನಿಗಳು 121 ದಶಲಕ್ಷ ಮೈಲು ದೂರ ಪ್ರಯಾಣ ಬೆಳೆಸಿದ್ದಾರೆ. ಈ ಬಳಲಿಕೆಯಿಂದ ಹೊರಬರಲು ನಾಸಾ ಇಬ್ಬರಿಗೂ 45 ದಿನಗಳ ಪುನಶ್ಚೇತನ ಕಾಲಾವಕಾಶ ನೀಡಿದೆ. ಆರಂಭದಲ್ಲಿ ಬುಧವಾರ ರಾತ್ರಿ ಅವರ ಪ್ರಯಾಣ ಆರಂಭವಾಗುವ ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಅನಾನುಕೂಲಕರ ವಾತಾವರಣದ ಕಾರಣದಿಂದ ವಾರಾಂತ್ಯಕ್ಕೆ ಮುಂದೂಡಲ್ಪಟ್ಟಿತ್ತು.