ಸಿರಿಯಾ: ಸ್ಫೋಟದಲ್ಲಿ 7 ನಾಗರಿಕರು ಮೃತ್ಯು

ಸಾಂದರ್ಭಿಕ ಚಿತ್ರ
ದಮಾಸ್ಕಸ್: ವಾಯವ್ಯ ಸಿರಿಯಾದ ಇದ್ಲಿಬ್ ಪ್ರಾಂತದಲ್ಲಿ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಶಸ್ತ್ರಾಸ್ತ್ರಗಳ ಕೊಠಡಿಯಲ್ಲಿ ಸ್ಫೋಟ ಸಂಭವಿಸಿ ಮಹಿಳೆ ಮತ್ತು ಮಗು ಸಹಿತ 7 ನಾಗರಿಕರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಹಲವರು ಗಾಯಗೊಂಡಿರುವ ವರದಿಯಿದ್ದು ಸಾವಿನ ಪ್ರಮಾಣ ಹೆಚ್ಚಬಹುದು ಎಂದು ವರದಿ ಹೇಳಿದೆ. ಅಂತರ್ಯುದ್ಧದಲ್ಲಿ ಜರ್ಝರಿತಗೊಂಡಿರುವ ಸಿರಿಯಾದಲ್ಲಿ ಬಶರ್ ಅಸ್ಸಾದ್ರನ್ನು ಕಳೆದ ಡಿಸೆಂಬರ್ ನಲ್ಲಿ ಬಂಡುಕೋರ ಗುಂಪು ಪದಚ್ಯುತಗೊಳಿಸಿದ ಬಳಿಕ ಸ್ಥಳಾಂತರಗೊಂಡ ನಾಗರಿಕರು ಸ್ವದೇಶಕ್ಕೆ ಹಿಂತಿರುಗುತ್ತಿದ್ದಾರೆ. ಆದರೆ ಹಲವೆಡೆ ಪರಿತ್ಯಕ್ತ ಶಸ್ತ್ರಾಸ್ತ್ರಗಳು ಸ್ಫೋಟಗೊಳ್ಳುವ ಅಪಾಯವಿದೆ ಎಂದು ಮಾನವ ಹಕ್ಕುಗಳ ಸಿರಿಯಾ ಏಜೆನ್ಸಿ ಎಚ್ಚರಿಕೆ ನೀಡಿದೆ.
Next Story