ತೈವಾನ್: ಗ್ಯಾಸ್ ಸ್ಫೋಟಕ್ಕೆ 5 ಬಲಿ; 26 ಮಂದಿಗೆ ಗಾಯ

Photo Credit | AFP: I-Hwa Cheng
ತೈಪೆ: ತೈವಾನ್ನ ತೈಚುಂಗ್ ಪ್ರಾಂತದ ಶಾಪಿಂಗ್ ಮಾಲ್ನಲ್ಲಿ ಗುರುವಾರ ಗ್ಯಾಸ್ ಸ್ಫೋಟಗೊಂಡು ಕನಿಷ್ಠ 5 ಮಂದಿ ಮೃತಪಟ್ಟಿದ್ದು 26 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ತೈಚುಂಗ್ನಲ್ಲಿರುವ ಶಾಪಿಂಗ್ ಮಾಲ್ನ 12ನೇ ಅಂತಸ್ತಿನಲ್ಲಿ ಸ್ಫೋಟ ಸಂಭವಿಸಿದ್ದು ಹಲವು ಅಂಗಡಿಗಳು ಹಾನಿಗೊಂಡಿವೆ. ಸ್ಫೋಟದ ತೀವ್ರತೆಗೆ 12ನೇ ಅಂತಸ್ತಿನಲ್ಲಿದ್ದ ಅಂಗಡಿಯೊಂದರ ಗೋಡೆ ಒಡೆದು 4 ಮಂದಿ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಕಟ್ಟಡದಲ್ಲಿದ್ದ 235 ಮಂದಿಯನ್ನು ತೆರವುಗೊಳಿಸಿದ್ದು ಅಗ್ನಿಶಾಮಕ ದಳದ 30 ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ .
Next Story