ಮಹಿಳೆಯರಿಗೆ ಉದ್ಯೋಗ ನೀಡಬೇಡಿ : ಅಫ್ಘಾನಿಸ್ತಾನದ ಎನ್ಜಿಒಗಳಿಗೆ ತಾಲಿಬಾನ್ ಆದೇಶ!
PC : AP/PTI
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಉದ್ಯೋಗ ನೀಡಿರುವ ಎಲ್ಲಾ ದೇಶೀಯ ಮತ್ತು ವಿದೇಶಿ ಎನ್ಜಿಒ(ಸರ್ಕಾರೇತರ ಸಂಘಟನೆ)ಗಳನ್ನು ಮುಚ್ಚುವುದಾಗಿ ತಾಲಿಬಾನ್ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಎನ್ಜಿಒಗಳು ಮಹಿಳಾ ಉದ್ಯೋಗಿಗಳ ನೇಮಕಾತಿಯನ್ನು ಸ್ಥಗಿತಗೊಳಿಸುವಂತೆ 2 ವರ್ಷದ ಹಿಂದೆ ತಾಲಿಬಾನ್ ಆದೇಶಿಸಿತ್ತು. ಈ ಆದೇಶವನ್ನು ಪಾಲಿಸದ ಎಲ್ಲಾ ಎನ್ಜಿಒಗಳ ಲೈಸೆನ್ಸ್ ಅನ್ನು ರದ್ದುಪಡಿಸುವುದಾಗಿ ರವಿವಾರ ರಾತ್ರಿ ಹೊರಡಿಸಿದ ಮತ್ತೊಂದು ಆದೇಶದಲ್ಲಿ ಅಫ್ಘಾನಿಸ್ತಾನದ ವಿತ್ತ ಸಚಿವಾಲಯ ಎಚ್ಚರಿಕೆ ನೀಡಿದೆ.
ತಾಲಿಬಾನ್ ನ ನಿಯಂತ್ರಣದಲ್ಲಿ ಇಲ್ಲದ ಎಲ್ಲಾ ಸಂಸ್ಥೆಗಳೂ ಮಹಿಳೆಯರಿಗೆ ಉದ್ಯೋಗ ನೀಡುವುದನ್ನು ನಿಲ್ಲಿಸದಿದ್ದರೆ ವಿತ್ತ ಸಚಿವಾಲಯ ಒದಗಿಸಿರುವ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
Next Story