ಐಸಿಸಿ ಬಂಧನ ವಾರಂಟ್ ತಿರಸ್ಕರಿಸಿದ ತಾಲಿಬಾನ್

PC : NDTV
ಕಾಬೂಲ್: ತಾಲಿಬಾನ್ ನಾಯಕರ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಕೋರಿರುವ ಬಂಧನ ವಾರಂಟ್ ರಾಜಕೀಯ ಪ್ರೇರಿತವಾಗಿದ್ದು ಅದನ್ನು ತಿರಸ್ಕರಿಸುವುದಾಗಿ ತಾಲಿಬಾನ್ ಸರಕಾರ ಶುಕ್ರವಾರ ಹೇಳಿದೆ.
ಮಹಿಳೆಯರ ಶೋಷಣೆಯ ಬಗ್ಗೆ ಅಫ್ಘಾನಿಸ್ತಾನದ ಹಿರಿಯ ತಾಲಿಬಾನ್ ನಾಯಕರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲು ಕೋರುವುದಾಗಿ ಐಸಿಸಿಯ ಮುಖ್ಯ ಪ್ರಾಸಿಕ್ಯೂಟರ್ ಗುರುವಾರ ಹೇಳಿದ್ದರು.
` ಐಸಿಸಿಯ ಇತರ ಅನೇಕ ನಿರ್ಧಾರಗಳಂತೆ ಇದು ನ್ಯಾಯೋಚಿತ ಕಾನೂನು ಆಧಾರಗಳನ್ನು ಹೊಂದಿಲ್ಲ. ಇದು ಐಸಿಸಿ ಅನುಸರಿಸುತ್ತಿರುವ ಎರಡು ಮಾನದಂಡಗಳಿಗೆ ನಿದರ್ಶನವಾಗಿದೆ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
Next Story