ಜಪಾನ್ ನಲ್ಲಿ ಭೀಕರ ಭೂಕಂಪ; ಸುನಾಮಿ ಭೀತಿ ಇಲ್ಲ
ಟೋಕಿಯೊ: ಜಪಾನ್ ನ ಇಶಿಕವಾ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 6.31ರ ಸುಮಾರಿಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಇಲಾಖೆ ಪ್ರಕಟಿಸಿದೆ.
ಈ ಭೂಕಂಪದ ಹಿನ್ನೆಲೆಯಲ್ಲಿ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ವಜೀಮಾ ಮತ್ತು ಸುಝು ನಗರಗಳಲ್ಲಿ ಭಾರಿ ಕಂಪನ ಅನುಭವಕ್ಕೆ ಬಂದಿದೆ. ಜಪಾನ್ ಭೂಕಂಪ ಮಾಪನದಲ್ಲಿ 5ಕ್ಕಿಂತ ಹೆಚ್ಚಿನ ತೀವ್ರತೆ ದಾಖಲಾಗಿದೆ. ನೋಟೊ ಪಟ್ಟಣದಲ್ಲಿ ಕೂಡಾ ಭಾರಿ ಕಂಪನ ಅನುಭವಕ್ಕೆ ಬಂದಿದ್ದರೂ, ತೀವ್ರತೆ 5ಕ್ಕಿಂತ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಶಿಕವಾ ಪ್ರಾಂತ್ಯದ ನನಾವೊ ನಗರ ಮತ್ತು ಅನಮಿಝು ಪಟ್ಟಣಗಳಲ್ಲಿ ಭೂಕಂಪ ಸಂಭವಿಸಿದ್ದು, ನೀಗತ ಪ್ರಾಂತ್ಯದ ಕೆಲ ಭಾಗಗಳಲ್ಲೂ 4 ತೀವ್ರತೆಯ ಕಂಪನ ಸಂಭವಿಸಿದೆ. ಭೂಕಂಪದ ಪರಿಣಾಮ, ಈಸ್ಟ್ ಜಪಾನ್ ರೈಲ್ವೆ ಹೊಕುರಿಕು ಶಿಂಕನ್ಸೆನ್ ಮತ್ತು ಜೊಯೆತ್ಸು ಶಿಂಕನ್ಸೆನ್ ಬುಲೆಟ್ ರೈಲುಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಡಿತದ ಹಿನ್ನೆಲೆಯಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.