ಭೀಕರ ಭೂಕಂಪ: ತೈವಾನ್, ಜಪಾನ್‍ನಲ್ಲಿ ಸುನಾಮಿ ಎಚ್ಚರಿಕೆ
ಹೊಸದಿಲ್ಲಿ: ಭಯಾನಕ ಸರಣಿ ಪ್ರಾಕೃತಿಕ ವಿಕೋಪಗಳಿಗೆ ಸಾಕ್ಷಿಯಾಗಿರುವ ಜಪಾನ್ ಹಾಗೂ ತೈವಾನ್ ಇದೀಗ ಪ್ರಬಲ ಭೂಕಂಪಕ್ಕೆ ಸಾಕ್ಷಿಯಾಗಿದೆ. ಇದು ವ್ಯಾಪಕ ಕಳವಳಕ್ಕೆ ಕಾರಣವಾಗಿದ್ದು, ಪರಿಹಾರ ಮತ್ತು ರಕ್ಷಣಾ ತಂಡಗಳ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಶಕ್ತಿಶಾಲಿ ಭೂಕಂಪದ ಬಳಿಕ ಒಕಿನವ ಕರಾವಳಿ ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಪಾನ್ ಅಧಿಕಾರಿಗಳು ಸಲಹೆ ಮಾಡಿದ್ದಾರೆ. ತೈವಾನ್ ಮೇಲೂ ಇದರ ಪ್ರಭಾವ ಸಾಧ್ಯತೆ ಇದ್ದು, ಸುಮಾರು ಮೂರು ಮೀಟರ್ ಎತ್ತರದ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಪಾನ್ ಹವಾಮಾನ ಏಜೆನ್ಸಿಯ ಮಾಹಿತಿಯಂತೆ ತೈವಾನ್ ಸಮೀಪ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಸಾಗರದ ಮೇಲ್ಮೈ ಮೇಲೆ ಗಂಭೀರ ಪರಿಣಾಮ ಬೀರಿ, ವಿನಾಶಕಾರಿ ಸುನಾಮಿ ಅಲೆಗಳನ್ನು ಸೃಷ್ಟಿಸುವ ಸಾಮಥ್ರ್ಯ ಹೊಂದಿವೆ ಸ್ಪಷ್ಟಪಡಿಸಿದೆ.
ಈ ಪೈಕಿ 30 ಸೆಂಟಿಮೀಟರ್ ನ ಅಲೆಗಳು ಯೊನಗುಣಿ ದ್ವೀಪದ ಮೇಲೆ ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 9.18ಕ್ಕೆ ಅಪ್ಪಳಿಸಿದ್ದು, ಇದು ಆತಂಕವನ್ನು ದೃಢಪಡಿಸಿದೆ.
ವಿಶ್ವದಲ್ಲಿ ಸಂಭವಿಸುವ 6 ಅಥವಾ ಅಧಿಕ ತೀವ್ರತೆಯ ಭೂಕಂಪದಲ್ಲಿ ಶೇಕಡ 20ರಷ್ಟು ಭೂಕಂಪಗಳು ಜಪಾನ್‍ನಲ್ಲಿ ಸಂಭವಿಸುತ್ತವೆ. ಹೊಸವರ್ಷದಂದು ಇಶಿಕವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 230 ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು,
ತೈವಾನ್‍ನಲ್ಲಿ ಕೂಡಾ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ಕುಸಿದು ಬೀಳುತ್ತಿರುವ ದೃಶ್ಯಗಳು ವರದಿಯಾಗಿವೆ.
#BREAKING : powerful 7.5 magnitude earthquakes shake the ground of #Taiwan , sparking tsunami warning in #Japan #earthquake #Taiwan #Japan
— Global Affairs (@Global_Affairrs) April 3, 2024
pic.twitter.com/QHJTML85hk
#BREAKING : powerful 7.5 magnitude earthquakes shake the ground of #Taiwan , sparking tsunami warning in #Japan #earthquake #Taiwan #Japan
— Global Affairs (@Global_Affairrs) April 3, 2024
pic.twitter.com/QHJTML85hk