ತಂತಿ ತುಂಡಾಗಿ ಮಹಡಿಗಳ ಮಧ್ಯೆ ಸಿಲುಕಿದ ಲಿಫ್ಟ್; ಮಹಿಳೆ ಮೃತ್ಯು
ಸಾಂದರ್ಭಿಕ ಚಿತ್ರ.| Photo: NDTV
ನೊಯ್ಡಾ: ಇಲ್ಲಿನ ವಸತಿ ಸಮುಚ್ಚಯವೊಂದರಲ್ಲಿ ಲಿಫ್ಟ್ ನ ತಂತಿಯೊಂದು ತುಂಡಾಗಿ ಮಹಡಿಗಳ ನಡುವೆ ಸಿಲುಕಿದ್ದು, 73 ವರ್ಷದ ಮಹಿಳೆಯೊಬ್ಬರು ಹೃದಯ ಸ್ತಂಭನದಿಂದ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಲಿಫ್ಟ್ ನೆಲಕ್ಕೆ ಅಪ್ಪಳಿಸದಿದ್ದರೂ, ಮಧ್ಯದ ಮಹಡಿಗಳ ನಡುವೆ ಸಿಲುಕಿಕೊಂಡಿತು ಎಂದು ತಿಳಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಲಿಫ್ಟ್ ನ ತಂತಿ ತುಂಡಾಗಿ ನೇರವಾಗಿ ಕೆಳಗೆ ಬೀಳುವಾಗ ಅದರಲ್ಲಿ ಆ ಮಹಿಳೆಯು ಏಕಾಂಗಿಯಾಗಿದ್ದಳು ಎಂದು ಅವರು ತಿಳಿಸಿದ್ದಾರೆ.
“ಸೆಕ್ಟರ್ 142 ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪಾರಸ್ ತಿಯೆರ್ರಾ ಸೊಸೈಟಿ ವಸತಿ ಸಮುಚ್ಚಯದ ಲಿಫ್ಟ್ ತಂತಿ ತುಂಡರಿಸಿದ್ದರಿಂದ ಆ ಲಿಫ್ಟ್ ನಲ್ಲಿದ್ದ ಮಹಿಳೆಯು ತಲೆ ಸುತ್ತಿ ಬಂದು ಕೆಳಗೆ ಬಿದ್ದಿದ್ದಾರೆ. ಲಿಫ್ಟ್ ನಲ್ಲಿ ಆ ಮಹಿಳೆಯು ಏಕಾಂಗಿಯಾಗಿದ್ದರು. ಅವರನ್ನು ಫೆಲಿಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು” ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಘಟನೆಯ ಸುಮಾರು ಸಂಜೆ 4.30ರ ವೇಳೆ ಸಂಭವಿಸಿದ್ದು, ಒಂದು ಗಂಟೆಯ ನಂತರ ಆ ಮಹಿಳೆಯು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ನಡುವೆ, ಪಾರಸ್ ತಿಯೆರ್ರಾ ವಸತಿ ಸಮುಚ್ಚಯದ ನೂರಾರು ನಿವಾಸಿಗಳು ಈ ಘಟನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು, ಲಿಫ್ಟ್ ನಿರ್ವಹಣೆಯಂಥ ಸಾಮಾನ್ಯ ಸೇವೆಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಆಗ್ರಹಿಸಿದ್ದಾರೆ.