ವಿಶ್ವದ ಅತೀ ದೊಡ್ಡ ಹೆಬ್ಬಾವು ಅಮೆಝಾನ್ ಅರಣ್ಯದಲ್ಲಿ ಪತ್ತೆ
screenbrab : X \@DennD68
ಬ್ರಸೀಲಿಯಾ: ಅಮೆಝಾನ್ ಮಳೆಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಅನಕೊಂಡ(ಹೆಬ್ಬಾವು) ಪತ್ತೆಯಾಗಿರುವುದಾಗಿ ವರದಿಯಾಗಿದೆ.
`ನ್ಯಾಷನಲ್ ಜಿಯಾಗ್ರಫಿಕ್' ಕಾರ್ಯಕ್ರಮಕ್ಕೆ ಕಾಡುಪ್ರಾಣಿಗಳ ಬಗ್ಗೆ ವರದಿ ಒದಗಿಸುವ ಪ್ರೊಫೆಸರ್ ಫ್ರೀಕ್ ವಾಂಕ್ ಅಮೆಝಾನ್ ಅರಣ್ಯ ಪ್ರದೇಶದ ಅತ್ಯಂತ ದುರ್ಗಮ ಪ್ರದೇಶದಲ್ಲಿ 26 ಅಡಿ ಉದ್ದದ ಹೆಬ್ಬಾವನ್ನು ಪತ್ತೆ ಮಾಡಿದ್ದಾರೆ. ಇದು 440 ಪೌಂಡ್(ಸುಮಾರು 200 ಕಿ.ಗ್ರಾಂ) ತೂಕ, ಕಾರಿನ ಟಯರಿನಷ್ಟು ದಪ್ಪವಿದೆ. ಇದರ ತಲೆ ಮಾನವನ ತಲೆಯ ಗಾತ್ರದಲ್ಲಿದೆ ಎಂದವರು ವರದಿ ಮಾಡಿದ್ದಾರೆ. ಈ ತಳಿಯ ಹಾವುಗಳು ವಿಶ್ವದ ಅತೀ ದೊಡ್ಡ ಮತ್ತು ಭಾರದ ಹಾವುಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
`ನ್ಯಾಷನಲ್ ಜಿಯಾಗ್ರಫಿಕ್'ನ `ಪೋಲ್ ಟು ಪೋಲ್' ಸರಣಿ ಕಾರ್ಯಕ್ರಮಕ್ಕಾಗಿ ಅರಣ್ಯ ಪ್ರದೇಶದ ಚಿತ್ರೀಕರಣ ನಡೆಸುತ್ತಿರುವಾಗ ಇದು ಪತ್ತೆಯಾಗಿದೆ. ಸಂಶೋಧಕರು ಈ ತಳಿಗೆ `ಯುನೆಕ್ಟೆಸ್ ಅಕಯಿಮ' ಎಂಬ ಲ್ಯಾಟಿನ್ ಹೆಸರಿಟ್ಟಿದ್ದು `ಉತ್ತರದ ಹಸಿರು ಅನಕೊಂಡ' ಎಂಬುದು ಇದರರ್ಥವಾಗಿದೆ.
Next Story