ಜಿಂಪಿಂಗ್ ಸರ್ವಾಧಿಕಾರಿ: ಬೈಡನ್ ಪುನರುಚ್ಚಾರ
ಕ್ಸಿ ಜಿಂಪಿಂಗ್, ಜೋ ಬೈಡನ್ | Photo: PTI
ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಓರ್ವ ಸರ್ವಾಧಿಕಾರಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುನರುಚ್ಚರಿಸಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ `ಏಶಿಯಾ-ಪೆಸಿಫಿಕ್ ಆರ್ಥಿಕ ಸಹಕಾರ' ಶೃಂಗಸಭೆಯ ನೇಪಥ್ಯದಲ್ಲಿ ಜಿಂಪಿಂಗ್ ಹಾಗೂ ಬೈಡನ್ ನಡುವೆ ಮಾತುಕತೆ ನಡೆದ ಬಳಿಕ ನಡೆದ ಸುದ್ಧಿಗೋಷ್ಠಿಯಲ್ಲಿ `ನೀವು ಈ ಹಿಂದೆ ಕರೆದಂತೆ ಈಗಲೂ ಜಿಂಪಿಂಗ್ರನ್ನು ಸರ್ವಾಧಿಕಾರಿ ಎಂದು ಕರೆಯುತ್ತೀರಾ? ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ಬೈಡನ್ `ಚೆನ್ನಾಗಿ ನೋಡಿ, ಅವರು ಸರ್ವಾಧಿಕಾರಿಯಲ್ಲವೇ. ಅವರು ಕಮ್ಯುನಿಸ್ಟ್ ದೇಶವನ್ನು ಮುನ್ನಡೆಸುವ ವ್ಯಕ್ತಿ ಎಂಬ ಅರ್ಥದಲ್ಲಿ ಸರ್ವಾಧಿಕಾರಿ' ಎಂದರು.
ಬೈಡನ್ ಹೇಳಿಕೆಯನ್ನು ಚೀನಾ ಗುರುವಾರ ಖಂಡಿಸಿದೆ. `ಈ ರೀತಿಯ ಹೇಳಿಕೆ ಅತ್ಯಂತ ತಪ್ಪು ಮತ್ತು ಬೇಜವಾಬ್ದಾರಿಯಿಂದ ಕೂಡಿದೆ. ಚೀನಾ ಇದನ್ನು ದೃಢವಾಗಿ ವಿರೋಧಿಸುತ್ತದೆ' ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಹೇಳಿದ್ದಾರೆ.
Next Story