ದಕ್ಷಿಣ ಅಮೆರಿಕದಲ್ಲಿ ಅಬ್ಬರಿಸಿದ ಸುಂಟರಗಾಳಿ: ಕನಿಷ್ಠ 4 ಮಂದಿ ಬಲಿ
PC : AP/PTI
ವಾಷಿಂಗ್ಟನ್: ದಕ್ಷಿಣ ಅಮೆರಿಕಾದ್ಯಂತ ರವಿವಾರ ಅಪ್ಪಳಿಸಿದ ತೀವ್ರ ಚಂಡಮಾರುತದ ಜತೆ ಬೀಸಿದ ಸುಂಟರಗಾಳಿಯ ಅಬ್ಬರಕ್ಕೆ ಕನಿಷ್ಠ 4 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.
ಟೆಕ್ಸಾಸ್, ಲೂಸಿಯಾನಾ, ಮಿಸ್ಸಿಸಿಪ್ಪಿ, ಅಲಾಬಾಮ ಮತ್ತು ಜಾರ್ಜಿಯಾದಲ್ಲಿ ಸುಂಟರಗಾಳಿಯಿಂದ ಹಾನಿಯಾದ ಕನಿಷ್ಠ 45 ವರದಿಗಳಿವೆ. ಒಟ್ಟು ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ಹೇಳಿದೆ. ಹೂಸ್ಟನ್ ನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು ಸುಮಾರು 100 ಮನೆಗಳು ಹಾನಿಗೊಂಡಿವೆ. ಉತ್ತರ ಕ್ಯರೋಲಿನಾದಲ್ಲಿ ಟ್ರಕ್ನ ಮೇಲೆ ಮರ ಉರುಳಿಬಿದ್ದು ಓರ್ವ ಸಾವನ್ನಪ್ಪಿದ್ದಾನೆ. ಮಿಸಿಸಿಪ್ಪಿಯಲ್ಲಿ ಇಬ್ಬರು ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story