ಉಕ್ರೇನ್ ನ ಖನಿಜ ಸಂಪನ್ಮೂಲಗಳಿಗೆ ಟ್ರಂಪ್ ಬೇಡಿಕೆ ಸ್ವಾರ್ಥ ಸಾಧನೆ ; ಜರ್ಮನಿ ಟೀಕೆ

ಡೊನಾಲ್ಡ್ ಟ್ರಂಪ್ | PC : NDTV
ಬರ್ಲಿನ್: ಮಿಲಿಟರಿ ನೆರವಿಗೆ ಪ್ರತಿಯಾಗಿ ಉಕ್ರೇನ್ ನ ಅಪರೂಪದ ಖನಿಜ ಸಂಪನ್ಮೂಲಗಳಿಗೆ ಡೊನಾಲ್ಡ್ ಟ್ರಂಪ್ ಬೇಡಿಕೆ ಇಟ್ಟಿರುವುದನ್ನು ಖಂಡಿಸಿರುವ ಜರ್ಮನ್ ಛಾನ್ಸಲರ್ ಒಲಾಫ್ ಸ್ಕೋಲ್ಝ್ ,ಇದು ಸ್ವಾರ್ಥ ಸಾಧನೆ ಎಂದು ಟೀಕಿಸಿದ್ದಾರೆ.
ಉಕ್ರೇನ್ ಆಕ್ರಮಣಕ್ಕೆ ಒಳಗಾಗಿದೆ ಮತ್ತು ನಾವು ಅವರಿಗೆ ಯಾವುದೇ ಪ್ರತಿಫಲ ಅಪೇಕ್ಷಿಸದೆ ನೆರವಾಗುತ್ತಿದ್ದೇವೆ. ಇದು ಎಲ್ಲರ ನಿಲುವಾಗಿರಬೇಕು. ಪ್ರತಿಫಲದ ಅಪೇಕ್ಷೆಯಿಲ್ಲದೆ ನೆರವಾಗಬೇಕು. ಆದರೆ ಟ್ರಂಪ್ ಅವರ ಬೇಡಿಕೆ ಅತ್ಯಂತ ಸ್ವಾರ್ಥದ ಕ್ರಮವಾಗಿದೆ ಎಂದವರು ಟೀಕಿಸಿದ್ದಾರೆ. ಉಕ್ರೇನ್ ನ ಖನಿಜ ಸಂಪನ್ಮೂಲವನ್ನು ಯುದ್ಧ ಮುಗಿದ ಬಳಿಕ ದೇಶದ ಪುನರ್ರಚನೆಗೆ ಬಳಸಬೇಕು ಎಂದವರು ಆಗ್ರಹಿಸಿದ್ದಾರೆ.
Next Story