ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ನಾಮನಿರ್ದೇಶನ
ಡೊನಾಲ್ಡ್ ಟ್ರಂಪ್ | Photo: PTI
ನ್ಯೂಯಾರ್ಕ್: ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು 4ನೇ ಬಾರಿ ನಾಮನಿರ್ದೇಶನ ಮಾಡಲಾಗಿದೆ.
ಟ್ರಂಪ್ ಹೆಸರನ್ನು ರಿಪಬ್ಲಿಕನ್ ಸಂಸದೆ ಕ್ಲಾಡಿಯಾ ಟೆನ್ನೆ ನಾಮನಿರ್ದೇಶನ ಮಾಡಿದರು. ಇಸ್ರೇಲ್, ಬಹ್ರೇನ್ ಮತ್ತು ಯುಎಇ ನಡುವಿನ `ಐತಿಹಾಸಿಕ ಅಬ್ರಹಾಂ ಒಪ್ಪಂದ'ಕ್ಕೆ ಟ್ರಂಪ್ ಅಧಿಕಾರಾವಧಿಯಲ್ಲಿ 2020ರ ಸೆಪ್ಟಂಬರ್ ನಲ್ಲಿ ಸಹಿ ಹಾಕಲಾಗಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಪರಿಹರಿಸುವ , ಅರಬ್ ದೇಶಗಳು ಮತ್ತು ಇಸ್ರೇಲ್ ನಡುವಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ನಂತರ ಮೊರಾಕೊ ಮತ್ತು ಸುಡಾನ್ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದವು ಎಂದು ಕ್ಲಾಡಿಯಾ ಹೇಳಿದ್ದಾರೆ.
Next Story