ಟ್ಯುನೀಷಿಯಾ |16 ವಲಸಿಗರ ಮೃತದೇಹ ಪತ್ತೆ
pc :aljazeera.com
ಟ್ಯೂನಿಸ್ : ಟ್ಯುನೀಷಿಯಾದ ಮಲೌಲೆಚ್, ಸಲಾಕ್ತ ಮತ್ತು ಚೆಬ್ಬಾ ನಗರಗಳ ಕರಾವಳಿ ತೀರದ ಬಳಿ 16 ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಟ್ಯುನೀಷಿಯಾದ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಮೃತದೇಹಗಳು ಕೊಳೆತಿರುವುದರಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿ ಎಡ್ಡಿನ್ ಜೆಬಾಬ್ಲಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕಳೆದ ತಿಂಗಳು ಟ್ಯುನೀಷಿಯಾದ ಡೆಜರ್ಬ ಕರಾವಳಿ ತೀರದ ಬಳಿ ವಲಸಿಗರ ದೋಣಿ ಮುಳುಗಿ ಮೂವರು ಮಕ್ಕಳ ಸಹಿತ ಕನಿಷ್ಟ 15 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ನಾಪತ್ತೆಯಾಗಿದ್ದರು.
Next Story