ಇರಾಕ್, ಸಿರಿಯಾದಲ್ಲಿ ನೆಲೆಗಳ ಮೇಲೆ ಟರ್ಕಿ ದಾಳಿ
PC : X
ಅಂಕಾರ : ಅಂಕಾರಾ ಬಳಿ ಟರ್ಕಿಯ ಉನ್ನತ ರಕ್ಷಣಾ ಸಂಸ್ಥೆ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (ಟಿಎಐ) ಮೇಲೆ ಬುಧವಾರ ನಡೆದ ದಾಳಿಗೆ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಬಂಡುಕೋರರ 30 ನೆಲೆಗಳನ್ನು ಗುರಿಯಾಗಿಸಿ ಗುರುವಾರ ಟರ್ಕಿ ಸರಣಿ ವೈಮಾನಿಕ ದಾಳಿ ನಡೆಸಿದೆ.
ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ(ಪಿಕೆಕೆ)ಯ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಬಂಡುಕೋರರ ಭೂಗತ ಬಂಕರ್ ಗಳು, ನೆಲೆಗಳು ಹಾಗೂ ಮೂಲಸೌಕರ್ಯಗಳನ್ನು ನಾಶಗೊಳಿಸಲಾಗಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಹೇಳಿದೆ. ವೈಮಾನಿಕ ದಾಳಿಯಲ್ಲಿ 12 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾದ ಸೇನೆ ಹೇಳಿದೆ. ಬುಧವಾರ ಟರ್ಕಿಯ ಟಿಎಐ ಮೇಲೆ ನಡೆದ ದಾಳಿಯಲ್ಲಿ ಮಂದಿ ಮೃತಪಟ್ಟಿದ್ದು ಕನಿಷ್ಠ 12 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
Next Story