ವಲಸಿಗರಿದ್ದ ವ್ಯಾನ್ ಉರುಳಿಬಿದ್ದು ಇಬ್ಬರು ಮೃತ್ಯು ; 25 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ಜಾಗ್ರೆಬ್ : ಮಧ್ಯ ಕ್ರೊಯೇಷಿಯಾದಲ್ಲಿ ವಲಸಿಗರು ತುಂಬಿದ್ದ ವ್ಯಾನೊಂದು ರಸ್ತೆ ಪಕ್ಕ ಸ್ಕಿಡ್ ಆಗಿ ಉರುಳಿಬಿದ್ದು ಇಬ್ಬರು ಮೃತಪಟ್ಟಿದ್ದು ಇತರ 25 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಶನಿವಾರ ಹೇಳಿದ್ದಾರೆ.
ರಾಜಧಾನಿ ಜಾಗ್ರೆಬ್ನ ಬಳಿಯ ಪೆಕ್ಲೆನಿಕಾ ನಗರದಲ್ಲಿ ಶನಿವಾರ ಬೆಳಿಗ್ಗೆ ಅಪಘಾತ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಜರ್ಮನಿಯ ನಂಬರ್ ಪ್ಲೇಟ್ ಹೊಂದಿದ್ದ ವ್ಯಾನನ್ನು ಪತ್ತೆಹಚ್ಚಿದ ಗಸ್ತು ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ ಚಾಲಕ ವೇಗವಾಗಿ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಗಸ್ತು ಪೊಲೀಸರು ಬೆನ್ನಟ್ಟಿದ್ದು ಶರವೇಗದಲ್ಲಿ ಧಾವಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿ ರಸ್ತೆ ಪಕ್ಕ ಉರುಳಿ ಬಿದ್ದಿದೆ. ವ್ಯಾನ್ನಲ್ಲಿ ಇರಾಕ್, ಟರ್ಕಿ, ಸಿರಿಯಾ ಮತ್ತು ಫೆಲೆಸ್ತೀನ್ ಪ್ರಜೆಗಳಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಲ್ಲಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Next Story