ಬ್ರಿಟನ್ ಪ್ರಜೆಗಳ ಪ್ರಯಾಣ | ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ
Photo: NDTV
ಲಂಡನ್: ಬ್ರಿಟನ್ ಪ್ರಜೆಗಳ ಪ್ರಯಾಣಕ್ಕೆ ಅತ್ಯಂತ ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿರುವುದಾಗಿ ಬ್ರಿಟನ್ನ `ದಿ ಫಾರಿನ್, ಕಾಮನ್ವೆಲ್ತ್ ಆ್ಯಂಡ್ ಡೆವಲಪ್ಮೆಂಟ್ ಆಫೀಸ್'ನ ಹೇಳಿಕೆಯನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.
ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿ ಮತ್ತು ನೈಸರ್ಗಿಕ ವಿಕೋಪ ಸೇರಿದಂತೆ ಸಂದರ್ಶಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ವಿಷಯಗಳನ್ನು ಆಧರಿಸಿ ಈ ಪಟ್ಟಿಗೆ ಪಾಕ್ ಜತೆಗೆ ರಶ್ಯ, ಉಕ್ರೇನ್, ಇಸ್ರೇಲ್, ಸುಡಾನ್, ಲೆಬನಾನ್, ಬೆಲಾರುಸ್ ಮತ್ತು ಫೆಲೆಸ್ತೀನ್ ಪ್ರದೇಶಗಳನ್ನು ಸೇರಿಸಲಾಗಿದೆ ಎಂದು ವರದಿ ಹೇಳಿದೆ.
Next Story