ಉಕ್ರೇನ್: ರಶ್ಯದ ಡ್ರೋನ್ ದಾಳಿಯಲ್ಲಿ9 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ - AI
ಕೀವ್: ಉಕ್ರೇನ್ ನ ಎರಡನೇ ಅತೀ ದೊಡ್ಡ ನಗರ ಖಾರ್ಕಿವ್ ಮೇಲೆ ಬುಧವಾರ ತಡರಾತ್ರಿ ರಶ್ಯ ಪಡೆಗಳು ನಡೆಸಿದ ವ್ಯಾಪಕ ಡ್ರೋನ್ ದಾಳಿಯಲ್ಲಿ 9 ಮಂದಿ ಗಾಯಗೊಂಡಿದ್ದು ಅಪಾರ ನಾಶ-ನಷ್ಟ ಸಂಭವಿಸಿದೆ ಎಂದು ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ರಶ್ಯದ ಗಡಿಭಾಗದ ಸನಿಹದಲ್ಲಿರುವ ಖಾರ್ಕಿವ್ ನಗರದ ಮೇಲೆ 12 ಡ್ರೋನ್ಗಳ ಮೂಲಕ ನಡೆಸಿದ ದಾಳಿಯಿಂದ ಹಲವು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ತಂಡ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿದೆ ಎಂದು ನಗರದ ಮೇಯರ್ ಇಹೊರ್ ಟೆರೆಖೋವ್ ಹೇಳಿದ್ದಾರೆ. ಮಧ್ಯ ಉಕ್ರೇನ್ ನ ನಿಪ್ರೊ ನಗರದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಹಲವು ಕಟ್ಟಡಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಂತೀಯ ಮೇಯರ್ ಸೆಹ್ರಿಯ್ ಲಿಸಾಕ್ ಹೇಳಿದ್ದಾರೆ.
Next Story