ಉಕ್ರೇನ್: ಮಕ್ಕಳ ಆಸ್ಪತ್ರೆ ಸಹಿತ ಹಲವೆಡೆ ರಶ್ಯದ ಸರಣಿ ಕ್ಷಿಪಣಿ ದಾಳಿ; 17 ಮಂದಿ ಸಾವು; 31 ಮಂದಿಗೆ ಗಾಯ
PC : X
ಕೀವ್ : ಉಕ್ರೇನ್ ನ ಐದು ನಗರಗಳ ಮೇಲೆ ರಶ್ಯ ಸೋಮವಾರ 40ಕ್ಕೂ ಅಧಿಕ ಕ್ಷಿಪಣಿಗಳ ಮಳೆಗರೆದಿದ್ದು ರಾಜಧಾನಿ ಕೀವ್ ನಲ್ಲಿ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದರೆ ಮತ್ತೊಂದು ಕ್ಷಿಪಣಿ ಮಕ್ಕಳ ಆಸ್ಪತ್ರೆಗೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೀವ್ ನ ಒಖ್ಮಡಿಟಿಚ್ ಮಕ್ಕಳ ಆಸ್ಪತ್ರೆಯ ಎರಡು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದಿದ್ದು ಅದರಡಿ ಕೆಲವರು ಸಿಲುಕಿರುವ ಸಾಧ್ಯತೆಯಿದೆ. ದಾಳಿಯಲ್ಲಿ ಸಾವು-ನೋವಿನ ಬಗ್ಗೆ ಮಾಹಿತಿಯಿಲ್ಲ. ಮಧ್ಯ ಉಕ್ರೇನ್ ನ ಮತ್ತೊಂದು ನಗರ ಕ್ರಿಯಿವ್ ರಿಹ್ ನಲ್ಲಿ ನಡೆದ ದಾಳಿಯಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 31 ಮಂದಿ ಗಾಯಗೊಂಡಿದ್ದಾರೆ. ರಶ್ಯ 40 ವಿವಿಧ ಕ್ಷಿಪಣಿ ದಾಳಿ ನಡೆಸಿದ್ದು ವ್ಯಾಪಕ ಸಾವು-ನೋವು ಸಂಭವಿಸಿದೆ. ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಸೋಮವಾರ ಬೆಳಿಗ್ಗೆ ನಡೆದ ಕ್ಷಿಪಣಿಗಳ ಸರಣಿ ದಾಳಿಯಲ್ಲಿ ದೇಶದಾದ್ಯಂತ ಕನಿಷ್ಟ 20 ಮಂದಿ ಸಾವನ್ನಪ್ಪಿದ್ದು ಸುಮಾರು 50 ಮಂದಿ ಗಾಯಗೊಂಡಿರುವುದಾಗಿ ಆಂತರಿಕ ಸಚಿವ ಇಹೊರ್ ಕ್ಲಿಮೆಂಕೊ ಹೇಳಿದ್ದಾರೆ. ಮಧ್ಯ ಉಕ್ರೇನ್ನ ಡಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲೂ ಭಾರೀ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ಕಳೆದ ವಾರ ನಡೆದ ಚರ್ಚೆಯಲ್ಲಿ ಟ್ರಂಪ್ ಎದುರು ಬೈಡನ್ ಹಿನ್ನಡೆ ಅನುಭವಿಸಿದ್ದರಿಂದ ಅವರನ್ನು ಬದಲಿಸಬೇಕೆಂದು ಡೆಮೊಕ್ರಟಿಕ್ ಪಕ್ಷದೊಳಗೇ ಆಗ್ರಹ ಕೇಳಿಬಂದಿದ್ದು ಪಕ್ಷದ ಐವರು ಸಂಸದರು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬೈಡನ್ರನ್ನು ಬಹಿರಂಗವಾಗಿ ಒತ್ತಾಯಿಸಿದ್ದರು.