ರಶ್ಯದ ಅತ್ಯಾಧುನಿಕ ಯುದ್ಧವಿಮಾನ ನಾಶಗೊಳಿಸಿದ ಉಕ್ರೇನ್: ವರದಿ
ಸಾಂದರ್ಭಿಕ ಚಿತ್ರ | PC : NDTV
ಕೀವ್, ಜೂ.9: ತನ್ನ ಪಡೆಗಳು ಮುಂಚೂಣಿಯಿಂದ ಸುಮಾರು 600 ಕಿ.ಮೀ. ದೂರದ ವಾಯುನೆಲೆಯಲ್ಲಿದ್ದ ರಶ್ಯದ ಅತ್ಯಾಧುನಿಕ ಎಸ್ಯು-57 ಯುದ್ಧವಿಮಾನವನ್ನು ತನ್ನ ಪಡೆಗಳು ನಾಶಗೊಳಿಸಿವೆ ಎಂದು ಉಕ್ರೇನ್ ರವಿವಾರ ಹೇಳಿದೆ.
ರಶ್ಯದೊಳಗೆ ಸೀಮಿತ ದಾಳಿ ನಡೆಸಲು ತಮ್ಮ ಶಸ್ತ್ರಾಸ್ತ್ರಗಳನ್ನು ಬಳಸುವುದಕ್ಕೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್ಗೆ ಅನುಮತಿಸಿದ ಬಳಿಕ ಉಕ್ರೇನ್ ನಡೆಸಿದ ಮಹತ್ವದ ಕಾರ್ಯಾಚರಣೆ ಇದಾಗಿದೆ. ದಾಳಿಯ ಬಳಿಕದ ಉಪಗ್ರಹವೀಡಿಯೊಗಳನ್ನು ಉಕ್ರೇನ್ನ ಮಿಲಿಟರಿ ಗುಪ್ತಚರ ಸೇವೆ ಹಂಚಿಕೊಂಡಿದೆ. ಮುಂಚೂಣಿಯಿಂದ ಸುಮಾರು 600 ಕಿ.ಮೀ. ಒಳಗಿರುವ ದಕ್ಷಿಣ ರಶ್ಯದ ಅಖ್ತುಬಿಂಸ್ಕ್ ವಾಯುನೆಲೆಯ ಮೇಲೆ ಶನಿವಾರ ದಾಳಿ ನಡೆದಿರುವುದಾಗಿ ಉಕ್ರೇನ್ನ ಮಿಲಿಟರಿ ಗುಪ್ತಚರ ಪ್ರಾಧಿಕಾರ ಹೇಳಿದೆ. ರಶ್ಯದ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story