ಅಮೆರಿಕದ ಬೆಂಬಲವಿಲ್ಲದೆ ಉಕ್ರೇನ್ ಉಳಿಯುವ ಅವಕಾಶ ಕಡಿಮೆ: ಝೆಲೆನ್ಸ್ಕಿ

ಝೆಲೆನ್ಸ್ಕಿ | PTI
ಕೀವ್: ಅಮೆರಿಕದ ಬೆಂಬಲವಿಲ್ಲದೆ ರಶ್ಯಾದ ದಾಳಿಯಿಂದ ಬದುಕುಳಿಯಲು ಉಕ್ರೇನ್ಗೆ ಕಡಿಮೆ ಅವಕಾಶವಿದೆ ಎಂದು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಶ್ಯ ಅಧ್ಯಕ್ಷ ಪುಟಿನ್ ಮಾತುಕತೆಗೆ ಒಲವು ತೋರಿರುವ ಹಿಂದೆ ಬೇರೆಯೇ ಉದ್ದೇಶವಿದೆ. ಯುದ್ಧ ಅಂತ್ಯಗೊಳ್ಳುವುದನ್ನು ಅವರು ಬಯಸುತ್ತಿಲ್ಲ, ಕದನ ವಿರಾಮದ ಮೂಲಕ ತನ್ನ ದೇಶದ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧಗಳಲ್ಲಿ ಕೆಲವನ್ನು ತೆರವುಗೊಳಿಸುವುದು ಮತ್ತು ತನ್ನ ಮಿಲಿಟರಿಗೆ ಮರುಸಂಘಟನೆಗೊಳ್ಳಲು ಅವಕಾಶ ಮಾಡಿಕೊಡುವುದು ಅವರ ಉದ್ದೇಶವಾಗಿದೆ. ಕದನ ಸ್ಥಗಿತಗೊಳ್ಳುವುದು, ಸಿದ್ಧತೆ, ತರಬೇತಿ ಮಾಡಿಕೊಳ್ಳುವುದು, ಕೆಲವು ನಿರ್ಬಂಧಗಳಿಂದ ವಿನಾಯಿತಿ ಪಡೆಯುವುದು ಅವರ ನಿಜವಾದ ಉದ್ದೇಶವಾಗಿದೆ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ.
ಬಹುಷಃ ಇದು(ಕದನ ವಿರಾಮ ಒಪ್ಪಂದ) ಸುಲಭವಲ್ಲ. ಆದರೆ ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲೂ ನಿಮಗೆ ಅವಕಾಶಗಳಿವೆ. ಆದರೆ ಅಮೆರಿಕದ ಬೆಂಬಲವಿಲ್ಲದೆ ನಮಗೆ ಉಳಿಯುವ ಅವಕಾಶ ಅತೀ ಕಡಿಮೆ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಬುಧವಾರ ಟ್ರಂಪ್ ಮತ್ತು ಝೆಲೆನ್ಸ್ಕಿಗೆ ಪ್ರತ್ಯೇಕ ಕರೆ ಮಾಡಿದ್ದ ಟ್ರಂಪ್ ಯುದ್ಧದ ಬಗ್ಗೆ ಚರ್ಚೆ ನಡೆಸಿದ್ದು ಉಕ್ರೇನ್-ರಶ್ಯ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಇದು ಪ್ರಥಮ ಹೆಜ್ಜೆ ಎಂದು ವ್ಯಾಖ್ಯಾನಿಸಲಾಗಿದೆ.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ್ದ ಟ್ರಂಪ್ ` ನೇಟೋಗೆ ಉಕ್ರೇನ್ ಸೇರ್ಪಡೆ ಕಾರ್ಯಶೀಲ ಎಂದು ತನಗನಿಸುವುದಿಲ್ಲ ಮತ್ತು ಉಕ್ರೇನ್ ತನ್ನ ಎಲ್ಲಾ ಭೂಮಿಗಳನ್ನು ರಶ್ಯದಿಂದ ಮರಳಿ ಪಡೆಯುವ ಸಾಧ್ಯತೆ ಕಡಿಮೆ' ಎಂದು ಹೇಳಿದ್ದರು.