ರಶ್ಯ ಸೇನೆಯ ವಿರುದ್ಧ ಉತ್ತರ ಕೊರಿಯಾದ ಕ್ಷಿಪಣಿ ಬಳಸಿದ ಉಕ್ರೇನ್
Photo: PTI/AP
ಕೀವ್: ಉಕ್ರೇನ್ ಯೋಧರು ರಶ್ಯ ಸೇನೆಯ ವಿರುದ್ಧ ಉತ್ತರ ಕೊರಿಯಾದ ರಾಕೆಟ್ಗಳನ್ನು ಬಳಸುತ್ತಿದ್ದಾರೆ ಎಂದು `ದಿ ಫೈನಾನ್ಶಿಯಲ್ ಟೈಮ್ಸ್' ವರದಿ ಮಾಡಿದೆ. ಮಿತ್ರದೇಶವು ವಶಕ್ಕೆ ಪಡೆದಿರುವ ಉತ್ತರ ಕೊರಿಯಾದ ರಾಕೆಟ್ಗಳನ್ನು ಉಕ್ರೇನ್ಗೆ ಒದಗಿಸಲಾಗಿದ್ದು ಅದನ್ನು ಬಳಸಲಾಗುತ್ತಿದೆ ಎಂದು ವರದಿ ಹೇಳಿದೆ.
ರಶ್ಯನ್ ಪಡೆಯಿಂದ ವಶಕ್ಕೆ ಪಡೆದಿರುವ ಉತ್ತರ ಕೊರಿಯಾ ನಿರ್ಮಿತ ರಾಕೆಟ್ಗಳನ್ನು ರಶ್ಯ ವಿರುದ್ಧದ ಯುದ್ಧದಲ್ಲಿ ಬಳಸುತ್ತಿರುವುದಾಗಿ ಉಕ್ರೇನ್ನ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಪೂರ್ವದ ಬಾಖ್ಮುಟ್ ನಗರದಲ್ಲಿ ಸೋವಿಯತ್ ಯುಗದ ಗ್ರಾಡ್ ಬಹು-ಉಡಾವಣಾ ರಾಕೆಟ್ ವ್ಯವಸ್ಥೆಯನ್ನು ತನ್ನ ಯೋಧರು ಬಳಸುತ್ತಿರುವ ವೀಡಿಯೊವನ್ನು ಉಕ್ರೇನ್ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.
ಉತ್ತರ ಕೊರಿಯಾವು ರಶ್ಯಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂದು ಅಮೆರಿಕ ಇತ್ತೀಚೆಗೆ ಆರೋಪಿಸಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ವಾರದ ಆರಂಭದಲ್ಲಿ ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಕಿಮ್ಜಾಂಗ್ ಉನ್ ಜತೆ ಚರ್ಚೆ ನಡೆಸಿದ್ದರು.