ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕ್ಯುಲೆಬಾ ರಾಜೀನಾಮೆ
ಡಿಮಿಟ್ರೊ ಕ್ಯುಬೆಲಾ | PC : PTI
ಕೀವ್ : ಸಚಿವ ಸಂಪುಟದ ಪುನರ್ರಚನೆ ಅವಿವಾರ್ಯ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ ಬೆನ್ನಲ್ಲೇ ವಿದೇಶಾಂಗ ಸಚಿವ ಡಿಮಿಟ್ರೊ ಕ್ಯುಬೆಲಾ ಬುಧವಾರ ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಕ್ಯುಬೆಲಾ ರಾಜೀನಾಮೆ ಸಲ್ಲಿಸಿರುವ ವಿಷಯದ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಂಸತ್ ಸ್ಪೀಕರ್ ರುಸ್ಲನ್ ಸ್ಟೆಫಾಂಚುಕ್ ಹೇಳಿದ್ದಾರೆ. ಅಧ್ಯಕ್ಷ ಝೆಲೆನ್ಸ್ಕಿ ನಂತರ ಉಕ್ರೇನ್ನ ಪ್ರಮುಖ ಸಾಗರೋತ್ತರ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದ 43 ವರ್ಷದ ಕ್ಯುಲೆಬಾ , ನಿರರ್ಗಳ ಇಂಗ್ಲಿಷ್ ಮೂಲಕ ಮಿಲಿಟರಿ ಮತ್ತು ರಾಜಕೀಯ ಬೆಂಬಲಕ್ಕಾಗಿ ಲಾಬಿ ಮಾಡಲು ಸಮರ್ಥರಾಗಿದ್ದರು.
ಮುಂದಿನ ಚಳಿಗಾಲಕ್ಕೂ ಮುನ್ನ ಸರಕಾರದ ಪುನರ್ರಚನೆಯ ಅಗತ್ಯವಿದೆ ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ ನೀಡಿರುವಂತೆಯೇ ಮಂಗಳವಾರ ಐವರು ಸಚಿವರು ರಾಜೀನಾಮೆ ಘೋಷಿಸಿದ್ದರು.
Next Story