ಇರಾನ್ನಿಂದ ತೈಲ ಸಾಗಿಸುವ ಸಂಸ್ಥೆಗಳಿಗೆ ಅಮೆರಿಕ ನಿರ್ಬಂಧ

PC : istockphoto
ವಾಷಿಂಗ್ಟನ್: ಭಾರತ ಮತ್ತು ಚೀನಾದಲ್ಲಿನ ಟ್ಯಾಂಕರ್ ಆಪರೇಟರ್ ಗಳು ಮತ್ತು ವ್ಯವಸ್ಥಾಪಕರು ಸೇರಿದಂತೆ ಇರಾನ್ ನ ಛಾಯಾ ತೈಲ ಉದ್ಯಮದ ವಿರುದ್ಧ ಅಮೆರಿಕದ ಹಣಕಾಸು ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ.
ಇರಾನ್ ನ ಪೆಟ್ರೋಲಿಯಂ ಸಂಬಂಧಿತ ಉತ್ಪನ್ನಗಳ ಮಾರಾಟ ಮತ್ತು ಸಾರಿಗೆ ಪ್ರಕ್ರಿಯೆಯಲ್ಲಿ ದಲ್ಲಾಳಿ ಕಾರ್ಯ ನಿರ್ವಹಿಸುತ್ತಿದ್ದ 30ಕ್ಕೂ ಅಧಿಕ ವ್ಯಕ್ತಿಗಳು ಹಾಗೂ ಹಡಗುಗಳು ನಿರ್ಬಂಧದ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಯುಇಎ ಮತ್ತು ಹಾಂಕಾಂಗ್ನ ತೈಲ ದಲ್ಲಾಳಿಗಳು, ಇರಾನ್ ನ `ನ್ಯಾಷನಲ್ ಇರಾನಿಯನ್ ಆಯಿಲ್ ಕಂಪೆನಿ'ಯೂ ಈ ಪಟ್ಟಿಯಲ್ಲಿದೆ. ಲಕ್ಷಾಂತರ ಬ್ಯಾರೆಲ್ ಕಚ್ಛಾ ತೈಲವನ್ನು ಮಾರಾಟ ಮಾಡಲು ಮತ್ತು ಸಾಗಿಸಲು ಇರಾನ್ `ಹಡಗುಗಳ ಛಾಯಾ ನೆಟ್ವರ್ಕ್' ಅನ್ನು ಅವಲಂಬಿಸಿದ್ದು ಈ ವ್ಯವಹಾರದಲ್ಲಿ ಲಭಿಸುವ ಹಣವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳಿಗೆ ಬಳಸುತ್ತಿದೆ' ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
Next Story