ಗಾಝಾದಲ್ಲಿ ಕದನ ವಿರಾಮಕ್ಕೆ ಅಮೆರಿಕ ಅಡ್ಡಿ: ಇರಾನ್ ಆಕ್ರೋಶ
Photo: PTI
ಟೆಹ್ರಾನ್: ಗಾಝಾ ಯುದ್ಧದಲ್ಲಿ ಕದನ ವಿರಾಮಕ್ಕೆ ಆಗ್ರಹಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಅಮೆರಿಕ ವೀಟೊ ಪ್ರಯೋಗಿಸಿರುವುದು ಮಧ್ಯಪ್ರಾಚ್ಯದ ಪರಿಸ್ಥಿತಿಯ ಅನಿಯಂತ್ರಿತ ಸ್ಫೋಟದ ಬೆದರಿಕೆ ಒಡ್ಡಿದೆ ಎಂದು ಇರಾನ್ ಎಚ್ಚರಿಸಿದೆ.
ಗಾಝಾಕ್ಕೆ ಸಂಪರ್ಕ ಕಲ್ಪಿಸುವ ರಫಾಹ್ ಗಡಿದಾಟನ್ನು ತಕ್ಷಣ ತೆರೆಯುವ ಮೂಲಕ ಗಾಝಾ ಪಟ್ಟಿಗೆ ಮಾನವೀಯ ನೆರವು ಪೂರೈಕೆಗೆ ಅನುವು ಮಾಡಿಕೊಡಬೇಕು ಎಂದು ಇರಾನ್ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.
ಎಲ್ಲಿಯವರೆಗೆ ಅಮೆರಿಕವು ಇಸ್ರೇಲ್ ಆಡಳಿತದ ಅಪರಾಧಗಳನ್ನು ಹಾಗೂ ಯುದ್ಧದ ಮುಂದುವರಿಕೆಯನ್ನು ಬೆಂಬಲಿಸುತ್ತದೋ ಅಲ್ಲಿಯವರೆಗೆ ವಲಯದ ಪರಿಸ್ಥಿತಿಯಲ್ಲಿ ಅನಿಯಂತ್ರಿತ ಸ್ಫೋಟದ ಸಾಧ್ಯತೆಯಿದೆ. ಇಸ್ರೇಲ್ಗೆ ಅಮೆರಿಕದ ಬೆಂಬಲವು ಶಾಶ್ವತ ಕದನ ವಿರಾಮ ಸ್ಥಾಪನೆಗೆ ಅಡ್ಡಿಯಾಗಿದೆ' ಎಂದವರು ಹೇಳಿದ್ದಾರೆ.
Next Story