ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಚುನಾವಣೆ | ಕೆಂಟಕಿ ಹಾಗೂ ಒರೆಗಾನ್ ರಾಜ್ಯಗಳಲ್ಲಿ ಬೈಡನ್, ಟ್ರಂಪ್ ಜಯಭೇರಿ
ಜೋ ಬೈಡನ್ , ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ರಿಪಬ್ಲಿಕನ್ ಪಕ್ಷದ ಎದುರಾಳಿಯಾದ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗಾಗಿ ಕೆಂಟಕಿ ಹಾಗೂ ಒರೆಗಾನ್ ರಾಜ್ಯಗಳಲ್ಲಿನ ಮಂಗಳವಾರ ನಡೆದ ಪ್ರಾಥಮಿಕ ಸ್ಪರ್ಧೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಉಭಯ ನಾಯಕರೂ ಮುಂದಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿನ ಅಭ್ಯರ್ಥಿಗಳಾಗಿ ನಾಮಕರಣಗೊಂಡಿದ್ದು ಹಾಗೂ ಅವರ ಎದುರಾಳಿಗಳು ಸ್ಪರ್ಧೆಯಿಂದ ನಿರ್ಗಮಿಸಿದ ಹೊರತಾಯೂ ಬೈಡನ್ ಹಾಗೂ ಟ್ರಂಪ್ ತಮ್ಮದೇ ಪಕ್ಷಗಳ ಕಾರ್ಯಕರ್ತರಿಂದ ಬಂಡಾಯವನ್ನು ಎದುರಿಸುತ್ತಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ನಿರ್ವಹಣೆಯಲ್ಲಿ ಬೈಡನ್ ಅವರ ವೈಫಲ್ಯವನ್ನು ಖಂಡಿಸಿ ಡೆಮಾಕ್ರಾಟ್ ಪಕ್ಷದ ಹಲವಾರು ಮಂದಿ ಕಾರ್ಯಕರ್ತರು ಅವರ ವಿರುದ್ಧ ಮತಚಲಾಯಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ನಿಕಿ ಹ್ಯಾಲೆ ಪರವಾಗಿ ಸಾವಿರಾರು ಮಂದಿ ಪಕ್ಷದ ಕಾರ್ಯಕರ್ತರು ಈಗಲೂ ಮತ ಚಲಾಯಿಸುವ ಮೂಲಕ ಟ್ರಂಪ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.