ಯೆಮನ್ನಲ್ಲಿ ಹೌದಿ ನೆಲೆಗಳ ಮೇಲೆ ಅಮೆರಿಕದ ದಾಳಿ: ವರದಿ
ಸಾಂದರ್ಭಿಕ ಚಿತ್ರ | PC : PTI
ನ್ಯೂಯಾರ್ಕ್ : ಯೆಮನ್ ರಾಜಧಾನಿ ಸನಾ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೌದಿಗಳ ನೆಲೆಯನ್ನು ಗುರಿಯಾಗಿಸಿ ಸೋಮವಾರ ಮತ್ತು ಮಂಗಳವಾರ ವೈಮಾನಿಕ ದಾಳಿ ನಡೆಸಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.
ಡಿಸೆಂಬರ್ 30 ಮತ್ತು 31ರಂದು ಅಮೆರಿಕದ ಸಮರ ನೌಕೆಗಳು ಹಾಗೂ ಯುದ್ಧವಿಮಾನಗಳು ಯೆಮನ್ನಲ್ಲಿನ ಹೌದಿ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆ ಹಾಗೂ ಅತ್ಯಾಧುನಿಕ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರ ಮತ್ತು ಕ್ಷಿಪಣಿ ಹಾಗೂ ಡ್ರೋನ್ಗಳ ಸಂಗ್ರಹಣಾ ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ರಾಜಧಾನಿ ಸನಾದ ಮೇಲೆ ಮಂಗಳವಾರ ಅಮೆರಿಕ ಹಲವು ವೈಮಾನಿಕ ದಾಳಿ ನಡೆಸಿದೆ. ಆದರೂ ದೇಶವು ತನ್ನನ್ನು ರಕ್ಷಿಸಿಕೊಳ್ಳಲು ಶಕ್ತವಾಗಿದೆ ಎಂದು ಹೌದಿಗಳ ವಕ್ತಾರ ಮುಹಮ್ಮದ್ ಅಬ್ದುಲ್ ಸಲಾಮ್ ಹೇಳಿದ್ದಾರೆ.
Next Story