6 ದೇಶಗಳ ಪ್ರಜೆಗಳಿಗೆ ವೀಸಾ-ಮುಕ್ತ ಪ್ರವೇಶ: ಚೀನಾ ಘೋಷಣೆ
Photo: PTI
ಬೀಜಿಂಗ್: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕ್ರಮವಾಗಿ ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ಸ್ಪೈನ್ ಮತ್ತು ಮಲೇಶ್ಯಾ ದೇಶಗಳ ನಾಗರಿಕರಿಗೆ ತಾತ್ಕಾಲಿಕವಾಗಿ ವೀಸಾ-ಮುಕ್ತ ಪ್ರವೇಶಾವಕಾಶ ಒದಗಿಸುವುದಾಗಿ ಚೀನಾ ಘೋಷಿಸಿದೆ.
ವ್ಯಾಪಾರ, ಪ್ರವಾಸೋದ್ಯಮ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಉದ್ದೇಶದಿಂದ ಚೀನಾಕ್ಕೆ ಆಗಮಿಸುವ ಈ 6 ದೇಶಗಳ ನಾಗರಿಕರಿಗೆ ಡಿಸೆಂಬರ್ 1ರಿಂದ 2024ರ ನವೆಂಬರ್ 30ರವರೆಗೆ ವೀಸಾ-ಮುಕ್ತ ಪ್ರವೇಶಾವಕಾಶ ನೀಡಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಶುಕ್ರವಾರ ಹೇಳಿದ್ದಾರೆ.
ಮೂರು ವರ್ಷಗಳ ಕಟ್ಟುನಿಟ್ಟಿನ ಕೋವಿಡ್-19 ನಿರ್ಬಂಧಗಳ ಬಳಿಕ ಚೀನಾ ತನ್ನ ಪ್ರವಾಸೋದ್ಯಮ ವಲಯವನ್ನು ಪುನರುಜ್ಜೀವನಗೊಳಿಸಲು ಅಂತರಾಷ್ಟ್ರೀಯ ವಿಮಾನ ಮಾರ್ಗಗಳ ಮರುಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜುಲೈಯಲ್ಲಿ ಸಿಂಗಾಪುರ ಮತ್ತು ಬ್ರೂನಿ ನಾಗರಿಕರಿಗೆ 15 ದಿನಗಳ ವೀಸಾಮುಕ್ತ ಪ್ರವೇಶವನ್ನು ಪುನರಾರಂಭಿಸಿತು. ಆಗಸ್ಟ್ನಲ್ಲಿ ದೇಶದ ಒಳಗೆ ಬರುವ ಈ ತಿಂಗಳಾರಂಭದಲ್ಲಿ ಚೀನಾ ತನ್ನ ವೀಸಾ ಮುಕ್ತ ಸಾರಿಗೆ ನೀತಿಯನ್ನು ನಾರ್ವೆ ಸೇರಿದಂತೆ 54 ದೇಶಗಳಿಗೆ ವಿಸ್ತರಿಸಿದೆ.