ಪಶ್ಚಿಮದಂಡೆ: ಇಸ್ರೇಲ್ ದಾಳಿಯಲ್ಲಿ ಮೂವರು ಫೆಲೆಸ್ತೀನೀಯರ ಮೃತ್ಯು

ಸಾಂದರ್ಭಿಕ ಚಿತ್ರ (PTI)
ರಮಲ್ಲಾ : ಆಕ್ರಮಿತ ಪಶ್ಚಿಮದಂಡೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಫೆಲೆಸ್ತೀನೀಯರು ಹತರಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಪಶ್ಚಿಮದಂಡೆಯ ಉತ್ತರದ ನಗರ ಜೆನಿನ್ನಲ್ಲಿ ಜನವರಿ 21ರಿಂದ ಟ್ಯಾಂಕ್ಗಳ ಮೂಲಕ ಆರಂಭಗೊಂಡಿರುವ ಇಸ್ರೇಲ್ ಪಡೆಗಳ ಕಾರ್ಯಾಚರಣೆ 44ನೇ ದಿನಕ್ಕೆ ಮುಂದುವರಿದಿದೆ. ` ಜೆನಿನ್ ನಗರದ ಉತ್ತರಭಾಗದಲ್ಲಿ ಮುಂದುವರಿದಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಸ್ಥಳೀಯ ಹಮಾಸ್ ನಾಯಕ ಹಾಗೂ ಮತ್ತೊಬ್ಬ ಸಶಸ್ತ್ರ ಹೋರಾಟಗಾರನನ್ನು ಇಸ್ರೇಲ್ ಪಡೆ ಹತ್ಯೆ ಮಾಡಿದೆ. ಇದೇ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ' ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಮೃತಪಟ್ಟ ಹಮಾಸ್ ನಾಯಕನನ್ನು ಅಸರ್ ಸಾದಿಯಾ ಎಂದು ಗುರುತಿಸಲಾಗಿದ್ದು ಆತನ ಮೃತದೇಹವನ್ನು ಇಸ್ರೇಲಿ ಪಡೆ ಕೊಂಡೊಯ್ದಿದೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
Next Story